HomeIndiaತಿರುಪತಿ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಭಕ್ತರು: ಹುಂಡಿ ಹಣದಲ್ಲೂ ಭಾರಿ ಇಳಿಕೆ

ತಿರುಪತಿ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಭಕ್ತರು: ಹುಂಡಿ ಹಣದಲ್ಲೂ ಭಾರಿ ಇಳಿಕೆ

ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಹುಂಡಿ ಹಣದಲ್ಲೂ ಭಾರಿ ಇಳಿಕೆಯಾಗಿದೆ.

ದಿನಕ್ಕೆ 80,000 ದಿಂದ ಒಂದು ಲಕ್ಷ ಭಕ್ತರ ನಿರೀಕ್ಷೆಗೆ ಕೇವಲ 67 ಸಾವಿರ ಭಕ್ತರು ಆಗಮಿಸಿದ್ದಾರೆ. ಹುಂಡಿ ಹಣದಲ್ಲಿಯೂ ಭಾರಿ ಇಳಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕಿಂತ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ 69 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು. ಕಳೆದ ವೈಕುಂಠ ಏಕಾದಶಿಯಲ್ಲಿ 7.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, ಈ ಬಾರಿ 2.5 ಕೋಟಿ ರೂ. ಸಂಗ್ರಹವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನದ ಟಿಕೆಟ್ ಸಿಗದಿರುವುದು, ನಿರ್ಬಂಧ, ಮುಂಗಡ ಬುಕಿಂಗ್ ರದ್ದುಗೊಳಿಸುವ ಆಯ್ಕೆ ಮೊದಲಾದ ಕಾರಣಗಳಿಂದ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular