ಚೆನ್ನೈ: ಅಂಕಿತ್ ತಿವಾರಿ ಪ್ರಕರಣದ ತನಿಖೆಯ ಸಂದರ್ಭದಲ್ಲಿ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು 15 ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಡಿವಿಎಸಿ 20 ಲಕ್ಷ ಲಂಚ ಸ್ವೀಕರಿಸುವಾಗ ಜಾರಿ ನಿರ್ದೇಶನಾಲಯದ ಜಾರಿ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿತ್ತು.ತಿವಾರಿ ಬಂಧನದ ನಂತರ, ಡಿವಿಎಸಿ ಅಧಿಕಾರಿಗಳು ಇಡಿಯ ಮಧುರೈ ವಲಯ ಕಚೇರಿಯಲ್ಲಿ ತಿವಾರಿ ಅವರ ಅಧಿಕೃತ ಆವರಣದಲ್ಲಿ ಶೋಧ ನಡೆಸಿದರು.
ಎಡಿ ಶ್ರೇಣಿಯ ಅಧಿಕಾರಿ ಸೇರಿದಂತೆ 15 ಇಡಿ ಅಧಿಕಾರಿಗಳು ತಿವಾರಿ ಅವರ ಕಚೇರಿ ಆವರಣದಲ್ಲಿ ಶೋಧ ನಡೆಸದಂತೆ ತಡೆದಿದ್ದಾರೆ ಎಂದು ಡಿವಿಎಸಿ ಅಧಿಕಾರಿ ತಮಿಳುನಾಡು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ 2016 ರ ಬ್ಯಾಚ್ ನಸದಸ್ಯರಾಗಿರುವ ಅಂಕಿತ್ ತಿವಾರಿ ಈ ವರ್ಷದ ಡಿಸೆಂಬರ್ ನಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ವೈದ್ಯರಿಂದ 20 ಲಕ್ಷ ರೂ.ಗಳ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.