HomeIndiaBIG NEWS: ಐಸಿಯುನಲ್ಲೇ ಬೀಡಿ ಸೇದಿದ ರೋಗಿ: ಆಸ್ಪತ್ರೆಯಲ್ಲಿ ಬೆಂಕಿ ತಗುಲಿ ಆತಂಕ

BIG NEWS: ಐಸಿಯುನಲ್ಲೇ ಬೀಡಿ ಸೇದಿದ ರೋಗಿ: ಆಸ್ಪತ್ರೆಯಲ್ಲಿ ಬೆಂಕಿ ತಗುಲಿ ಆತಂಕ

ಜಾಮ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಬೀಡಿ ಸೇರಿದ್ದು, ಆರ್.ಐ.ಸಿ.ಯು.ನಲ್ಲಿ ಬೆಂಕಿ ಕಿಡಿ ಹೊತ್ತಿ ಹಾನಿಯಾಗಿದೆ.

ಜಾಮ್ ನಗರದ ಸರ್ಕಾರಿ ಬಿಜಿ ಆಸ್ಪತ್ರೆಯ ಸಿಬ್ಬಂದಿ ಗುರುವಾರ ಬೆಳಗಿನ ಜಾವ ತಗುಲಿದ್ದ ಬೆಂಕಿ, ದಟ್ಟ ಹೊಗೆಯನ್ನು ಸಕಾಲದಲ್ಲಿ ನಂದಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಬೀಡಿ ಸೇದುವ ಚಟ ಬಂದಿದೆ. ಕೃತಕ ಉಸಿರಾಟದ ಆರೈಕೆ ಘಟಕದಲ್ಲಿ ಆಕ್ಸಿಜನ್ ಬೆಂಬಲದಲ್ಲಿದ್ದ ರೋಗಿ ಆಸ್ಪತ್ರೆ ಎನ್ನುವುದನ್ನು ಮರೆತು ಅಲ್ಲೇ ಬಿಡಿ ಸೇದಲು ಮುಂದಾಗಿದ್ದಾನೆ.

ಬೀಡಿಗೆ ಬೆಂಕಿ ಹಚ್ಚುತ್ತಿದ್ದಂತೆ ಕಿಡಿ ಹೊತ್ತಿ ಹೊಗೆ ಆವರಿಸಿದೆ. ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೀಪಕ್ ತಿವಾರಿ, ರೋಗಿಗೆ ಸಣ್ಣ ಗಾಯವಾಗಿದ್ದು, ಉಳಿದ ಎಲ್ಲಾ ರೋಗಿಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular