HomeKarnatakaBREAKING NEWS: ಆಟವಾಡುತ್ತಿದ್ದಾಗ ದುರಂತ: ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕಿ ದುರ್ಮರಣ

BREAKING NEWS: ಆಟವಾಡುತ್ತಿದ್ದಾಗ ದುರಂತ: ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕಿ ದುರ್ಮರಣ

ಬೆಂಗಳೂರು: ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ.

5 ವರ್ಷದ ಶಾಹಿದಾ ಬಾನು ಮೃತ ಬಾಲಕಿ. ಮನೆಯ ಕಾಂಪೌಂಡ್ ನಲ್ಲಿದ್ದ ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಶಾಹಿದಾ ಬಾನು, ಸೈಯದ್ ಹುಸೇನ್ ಹಾಗೂ ನಸ್ತಿನಾ ಬಾನು ದಂಪತಿಯ ಮಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಕ್ಕದ ಮನೆಯಲ್ಲಿದ್ದ ಬಿಹಾರ ಮೂಲದ ಹುಡುಗರು ಸಂಪ್ ಓಪನ್ ಮಾಡಿದ್ದರು. ಈ ವೇಳೆ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಬಿಹಾರ ಮೂಲದ ಹುಡುಗರು ಪರಾರಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular