ನಮ್ಮಲ್ಲಿ ಅನೇಕರು ಜ್ಯೋತಿಷ್ಯ ನಂಬುವವರಿದ್ದಾರೆ. ಜ್ಯೋತಿಷ್ಯದ ಪ್ರಕಾರವೇ ಮನೆಯಲ್ಲಿ ಶುಭ ಸಮಾರಂಭಗಳು, ಸಂಭ್ರಮದ ಕಾರ್ಯಕ್ರಮಗಳು ಆಯೋಜನೆಯಾಗುತ್ತವೆ.
ಜ್ಯೋತಿಷ್ಯದಲ್ಲಿ ಹೇಳಿದೆ ಎಂದು ಅನೇಕರು ಕೆಲವು ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲೇ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಬೇಕು, ಸಂಜೆಯಾದ ಮೇಲೆ ಇಂತಹ ಕೆಲಸಗಳನ್ನು ಮಾಡಬಾರದೆಂದು ಹೇಳುತ್ತಿರುತ್ತಾರೆ. ಅದರಂತೆ ಸೂರ್ಯಮುಳುಗಿದ ಮೇಲೆ ಈ 6 ಕೆಲಸಗಳನ್ನಂತೂ ಮಾಡಲೇಬಾರದು ಎನ್ನಲಾಗುತ್ತದೆ.
ಹಿಂದೂ ಜ್ಯೋತಿಷ್ಯದ ಪ್ರಕಾರ ಸಂಜೆಯಾದ ಮೇಲೆ ಈ ಕೆಳಗಿನ 6 ಕೆಲಸಗಳನ್ನು ಮಾಡಬಾರದು
* ಕೂದಲು ಕತ್ತರಿಸುವುದು ಅಥವಾ ತಲೆ ಬಾಚುವುದು:
ಸಂಜೆಯಾದ ಮೇಲೆ ತಲೆ ಬಾಚುವುದು ಅಥವಾ ಕೂದಲು ಕತ್ತರಿಸುವು ಶಕ್ತಿಯ ಸಮತೋಲನವನ್ನ ಅಡ್ಡಿಪಡಿಸುತ್ತದೆ ಎಂದು ಈ ಕ್ರಿಯೆಯನ್ನು ವಿರೋಧಿಸಲಾಗುತ್ತದೆ.
* ಆರ್ಥಿತ ವ್ಯವಹಾರ:
ವಾಸ್ತು ಪ್ರಕಾರ ಸಂಜೆಯಾದ ಮೇಲೆ ಹಣಕಾಸಿನ ವ್ಯವಹಾರ ಮಾಡಬಾರದು. ಸಾಲ ತೀರಿಸುವುದನ್ನೂ ಕೂಡ ಸೂರ್ಯ ಮುಳುಗಿದ ಮೇಲೆ ಮಾಡಬಾರದು ಎಂದು ನಂಬಲಾಗಿದೆ.
* ಗಿಡಗಳಿಗೆ ನೀರುಣಿಸುವುದು:
ಸೂರ್ಯ ಮುಳುಗಿದ ಮೇಲೆ ಗಿಡಗಳಿಗೆ ನೀರು ಹಾಕುವುದು ಗಿಡದ ಬೆಳವಣಿಗೆಗೆ ಅಡ್ಡಿ ಎಂದೇ ನಂಬಲಾಗಿದೆ. ಹೀಗಾಗಿ ಹಗಲು ವೇಳೆಯಲ್ಲಿ ಮಾತ್ರ ಗಿಡಗಳಿಗೆ ನೀರು ಹಾಕಬೇಕು.
* ಇವುಗಳನ್ನು ನೀಡಬೇಡಿ/ ದಾನ ಮಾಡಬೇಡಿ :
ಹಿಂದೂ ಧರ್ಮದಲ್ಲಿ ದಾನ ಮಾಡುವುದನ್ನ ಮಂಗಳಕರ ಎಂದು ನಂಬಲಾಗಿದೆ. ಅದಾಗ್ಯೂ ಸಂಜೆ ನಂತರ ಹಾಲು, ಮೊಸರು, ಉಪ್ಪು, ಸಕ್ಕರೆಯನ್ನು ನೀಡುವುದಿಲ್ಲ. ಇದನ್ನು ಅಪಶಕುನ ಎಂದು ನಂಬಲಾಗಿದೆ. ಒಂದು ವೇಳೆ ಸಂಜೆ ವೇಳೆ ಇಂತಹ ವಸ್ತುಗಳ ದಾನ ಬದುಕಿನ ಅಸ್ಥಿರತೆ ಮತ್ತು ಆರ್ಥಿಕ ತೊಂದರೆ ತರಬಹುದು ಎಂದು ನಂಬಲಾಗಿದೆ.
* ಮನೆ ಸ್ವಚ್ಛಗೊಳಿಸಬೇಡಿ:
ಸಂಜೆಯಾದ ಮೇಲೆ ಮನೆಯಲ್ಲಿ ಕಸ ಗುಡಿಸಬಾರದು. ಇದು ಅಮಂಗಳಕರ. ಈ ಅಭ್ಯಾಸವಿದ್ದರೆ ದುರಾದೃಷ್ಟ ಬರುತ್ತೆ ಎಂದು ನಂಬಲಾಗಿದೆ.
* ಉಗುರು ಕತ್ತರಿಸಬಾರದು:
ಲಕ್ಷ್ಮೀ ದೇವತೆಯು ರಾತ್ರಿ ವೇಳೆ ಮನೆಗೆ ಬರುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ ಸಂಜೆ ವೇಳೆ ನೀವು ಉಗುರು ಕತ್ತರಿಸಿದರೆ ಇದು ಅಮಂಗಳಕರ ಮತ್ತು ದೇವತೆಗೆ ಕೊಳಕು ಮಾಡಿದಂತೆ ಎನ್ನಲಾಗಿದೆ.