Job Alert : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ʻKPSCʼಯಿಂದ 3,000 ಹುದ್ದೆಗಳ ನೇಮಕಾತಿ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 2024 ನೇ ಸಾಲಿನಲ್ಲಿ ಬರೋಬ್ಬರಿ 3,000 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಯಾ ಇಲಾಖೆಗಳು ಪ್ರಸ್ತಾವನೆ ಸಲ್ಲಿಸಿದ್ದು, ಸುಮಾರು 3,000 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ ಸಿ ಮುಂದಾಗಿದ್ದು,  ಹೊಸವರ್ಷಕ್ಕೆ ಹುದ್ದೆಗಳ ಭರ್ತಿಗೆ ಗೆಜೆಟ್‌ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಸುಮಾರು 30 ಇಲಾಖೆಗಳಿಗೆ 2024 ರಲ್ಲಿ ನೇಮಕಾತಿ ಪ್ರಕ್ರಿಯೆಗೆ ಅಂದಾಜು ವೇಳಾಪಟ್ಟಿ ಬಿಡುಗಡೆಗೆ ಕೆಪಿಎಸ್‌ ಸಿ ಸಿದ್ಧತೆ ನಡೆಸಿದ್ದು, 30 ಇಲಾಖೆಗಳಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಡುವಂತೆ ಪ್ರಸ್ತಾವನೆಗಳು ಸ್ವೀಕೃತವಾಗಿವೆ.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ? ಇಲ್ಲಿದೆ ಮಾಹಿತಿ

ಬೆಂಗಳೂರು ಮಹಾನಗರ ಸಾಲಿಗೆ ಸಂಸ್ಥೆ – 2,583

ಕರ್ನಾಟಕ ವಿದ್ಯುತ್‌ ನಿಗಮ : ಗ್ರೂಪ್‌ ಬಿ 286, ಗ್ರೂಪ್‌ ಸಿ 336

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ -100

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ- ಗ್ರೂಪ್‌ ಬಿ 50, ಗ್ರೂಪ್‌ ಸಿ 14

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ : ಗ್ರೂಪ್‌ ಬಿ 6, ಗ್ರೂಪ್‌ ಸಿ 38

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ – ಗ್ರೂಪ್‌ ಬಿ 41

ಕರ್ನಾಟಕ ಸಾರಿಗೆ ನಿಗಮ -36 ಹುದ್ದೆಗಳು ಖಾಲಿ ಇವೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read