HomeKarnatakaBIG NEWS: ತಾಯಿಯನ್ನು ಹತ್ಯೆಗೈದಿದ್ದ ಮಗ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

BIG NEWS: ತಾಯಿಯನ್ನು ಹತ್ಯೆಗೈದಿದ್ದ ಮಗ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಂಗಳೂರು: ಹೆತ್ತ ತಾಯಿಯನ್ನು ಹತ್ಯೆಗೈದಿದ್ದ ಮಗನಿಗೆ ಬೆಂಗಳೂರು ಸಿಟಿ ಸಿವಿಲ್ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಅಪರಾಧಿ ಶರತ್ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಮಗ. ಘಟನೆ ನಡೆದು ಐದು ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಕೋರ್ಟ್ ತೀರ್ಪು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆ ಮಾರಾಟ ಮಾಡುವ ವಿಚಾರವಾಗಿ ತಾಯಿ ಕಾತ್ಯಾಯಿನಿ ಹಾಗೂ ಮಗ ಶರತ್ ಕುಮಾರ್ ನಡುವೆ ಜಗಳವಾಗಿತ್ತು. ಇದೇ ವಿಚಾರವಾಗಿ ಶರತ್ ಕುಮಾರ್, ತಾಯಿಯ ಮೂಗು ಹಾಗೂ ಬಾಯಿ ಮುಚ್ಚಿಸಿ ಉಸಿರುಗಟ್ಟಿಸಿ ಕೊಲೆಗೈದಿದ್ದ. 2018ರ ಜೂನ್ 13ರಂದು ಬೆಂಗಳೂರಿನ ಶ್ರೀರಾಂಪುರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಬಳಿಕ ಸಾಕ್ಷಾಧಾರಗಳ ನಾಶಮಾಡಿದ್ದ.

ಇದೀಗ ಈ ಪ್ರಕರಣ ಸಂಬಂಧ ಅಪರಾಧಿ ಶರತ್ ಕುಮಾರ್ ಗೆ ಐಪಿಸಿ ಸೆಕ್ಷನ್ 302ರ ಅಡಿ ಜೀವಾವಧಿ ಶಿಕ್ಷೆ ಹಾಗೂ ಕಲಂ 201ರಡಿ ಸಾಕ್ಷ್ಯ ನಾಶಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular