HomeKarnatakaSHOCKING NEWS: ಬೆಳಗಾವಿ ಬಳಿಕ ಹಾವೇರಿಯಲ್ಲಿಯೂ ಅಮಾನುಷ ಕೃತ್ಯ; ಪೊಲೀಸ್ ಠಾಣೆ ಎದುರೇ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ...

SHOCKING NEWS: ಬೆಳಗಾವಿ ಬಳಿಕ ಹಾವೇರಿಯಲ್ಲಿಯೂ ಅಮಾನುಷ ಕೃತ್ಯ; ಪೊಲೀಸ್ ಠಾಣೆ ಎದುರೇ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ

ಹಾವೇರಿ: ಕೆಲ ದಿನಗಳ ಹಿಂದೆ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಘಟನೆ ಬಗ್ಗೆ ತನಿಖೆ ನಡೆದಿರುವಾಗಲೇ ಇಂತದ್ದೇ ಅಮಾನುಷ ಘಟನೆ ಈಗ ಹಾವೇರಿಯಲ್ಲಿ ನಡೆದಿದೆ. ಯುವಕ-ಯುವತಿ ಪ್ರೀತಿಸಿ ಓಡಿ ಹೋದರೆಂದು ಯುವಕನ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಲಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುದೇನೂರು ಗ್ರಾಮದ ಯುವಕ ಚಳಗೇರಿ ಗ್ರಾಮದ ಯುವತಿಯನ್ನು ಪ್ರೀತಿಸಿ ಇಬ್ಬರೂ ಓಡಿ ಹೋದ ಕಾರಣಕ್ಕೆ ಯುವತಿ ಮನೆಯವರು ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕನ ಸೋದರ ಮಾವ ಪ್ರಶಾಂತ್ ಎಂಬುವವರನ್ನು ಅಪಹರಿಸಿ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ಎದುರೇ ಯುವತಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಕುಟುಂಬದವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular