HomeKarnatakaBIG NEWS: ಖ್ಯಾತ ರಂಗಕರ್ಮಿ ದಂಪತಿಯ ಸಾಕುಮಗಳು ನಾಪತ್ತೆ ಪ್ರಕರಣ; ಸ್ನೇಹಿತ ಸೇರಿ ನಾಲ್ವರು ಅರೆಸ್ಟ್

BIG NEWS: ಖ್ಯಾತ ರಂಗಕರ್ಮಿ ದಂಪತಿಯ ಸಾಕುಮಗಳು ನಾಪತ್ತೆ ಪ್ರಕರಣ; ಸ್ನೇಹಿತ ಸೇರಿ ನಾಲ್ವರು ಅರೆಸ್ಟ್

ಉಡುಪಿ: ಸಾಕುಮಗಳು ನಾಪತ್ತೆ ಪ್ರಕರಣದ ಬೆನ್ನಲ್ಲೇ ಖ್ಯಾತ ರಂಗಕರ್ಮಿ, ಸಮಾಜಸೇವಕ ಲೀಲಾಧರ್ ಶೆಟ್ಟಿ ಹಾಗೂ ಪತ್ನಿ ವಸುಂಧರಾ ಶೆಟ್ಟಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರು ಆರೋಪಿಗಳನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸರು ಬಂಧಿಸಿದ್ದಾರೆ.

ನಾಪತ್ತೆಯಾಗಿದ್ದ ಸಾಕುಮಗಳ ಸ್ನೇಹಿತ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿರ್ವ ನಿವಾಸಿ ಯುವತಿ ಸ್ನೇಹಿತ ಗಿರೀಶ್ (20), ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹಮ್ಮದ್ ಅಝೀಜ್ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೀಲಾಧರ್ ಶೆಟ್ಟಿ ದಂಪತಿಯ 16 ವರ್ಷದ ಸಾಕುಮಗಳು ನಾಪತ್ತೆಯಾಗಿರುವ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಕಾಪು ಠಾಣೆಯಲ್ಲಿ ಸಾಕುಮಗಳು ನಾಪತ್ತೆ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಇದೀಗ ನಾಲ್ವರು ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆಬಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಗಿರೀಶ್ ವಿರುದ್ಧ ಪೋಕ್ಸೋ ಕಾಯ್ದೆ, ಅತ್ಯಾಚರ ಹಾಗೂ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. ಇತರ ಮೂವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular