
ಸಂಸತ್ ನಲ್ಲಿ ಕಳೆದ ಬುಧವಾರ ನಡೆದ ಹೊಗೆ ಬಾಂಬ್ ದಾಖು ಕುರಿತು ಪ್ರತಿಕ್ರಿಯೆ ನೀಡಿದರು. ಘಟನೆಯು ಗಂಭೀರ ವಿಷಯವಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದಿದ್ದಾರೆ.
ಹೊಗೆ ಬಾಂಬ್ ದಾಳಿಯು ಅತ್ಯಂತ ಗಂಭೀರ ವಿಷಯವಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳು ರಾಜಕೀಯದಿಂದ ನೋಡಬಾರದು, ಘಟನೆ ಕುರಿತು ಲೋಕಸಭಾ ಅಧ್ಯಕ್ಷರು ತನಿಖೆಗೆ ಸೂಚಿಸಿದ್ದಾರೆ. ದಾಳಿ ಹಿಂದಿನ ವ್ಯಕ್ತಿಗಳು/ಸಂಘಟನೆಗಳು ಹಾಗೂ ಅವರ ಉದ್ದೇಶ ಏನು ಎಂಬುದು ಸಂಪೂರ್ಣವಾಗಿ ಬಹಿರಂಗವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು

