ಬಂಡ್ಲಾ ಧಾರ್: ಪ್ಯಾರಾಗ್ಲೈಡಿಂಗ್ ಹಲವಾರು ಜನರಿಗೆ ಜೀವನದಲ್ಲಿ ಅವರು ಬಯಸುವ ರೋಮಾಂಚನವನ್ನು ನೀಡುತ್ತದೆ ಮತ್ತು ಹಲವಾರು ಜನರು ಸಾಹಸ ಕ್ರೀಡೆಗಳನ್ನು ಪ್ರೀತಿಸುತ್ತಾರೆ. ಆದಾಗ್ಯೂ, ಪಂಜಾಬ್ ನ ವ್ಯಕ್ತಿಯೊಬ್ಬರು ಎಲೆಕ್ಟ್ರೀಕ್ ಬೈಕ್ ಮೇಲೆಯೇ ಕುಳಿತು ಪ್ಯಾರಾಗ್ಲೈಡಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹಿಮಾಚಲ ಪ್ರದೇಶದ ಬಂಡ್ಲಾ ಧಾರ್ನಲ್ಲಿ ಪ್ಯಾರಾಗ್ಲೈಡಿಂಗ್ಗೆ ತೆರಳಿದ್ದ ಹರ್ಷ್, ಸಾಹಸ ಕ್ರೀಡೆಯಲ್ಲಿ ಅಸಾಮಾನ್ಯ ರೀತಿಯಲ್ಲಿ ಭಾಗವಹಿಸುವ ಮೂಲಕ ಸಾಹಸ ಪ್ರಿಯರ ಹೃದಯಬಡಿತ ಹೆಚ್ಚಿಸಿದ್ದಾರೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಕುಳಿತು ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಹರ್ಷ್ ಅವರ ಅನುಭವವನ್ನು ವೀಕ್ಷಕರು ದಾಖಲಿಸಿದ್ದಾರೆ.
Punjab Man Performs Paragliding On E-Scooter, Video Goes Viral#EkhonKolkata #viralvideo pic.twitter.com/3tDi6zzCtd
— EkhonKolkata (@EkhonKolkata) December 15, 2023
ಪ್ಯಾರಾಗ್ಲೈಡಿಂಗ್ ಮಾಡುವಾಗ ಅವರು ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿಯನ್ನು ಹೊರತೆಗೆದರು. ಪ್ಯಾರಾಗ್ಲೈಡಿಂಗ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹರ್ಷ್ ಖುಷಿ ಹಂಚಿಕೊಂಡಿದ್ದಾರೆ ಮತ್ತು ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಕುಳಿತು ಪ್ಯಾರಾಗ್ಲೈಡಿಂಗ್ಗೆ ಹೋಗುತ್ತಿರುವುದು ಇದೇ ಮೊದಲು ಎಂದು ವರದಿಯಾಗಿದೆ.