
ಬೆಂಗಳೂರಿನ ಹೊರಮಾವು ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಗು ಗಲಾಟೆ ಮಾಡಿದ್ದಕ್ಕೆ ಶಿಕ್ಷಕಿ ಮಗುವಿನ ಕೆನ್ನೆಗೆ ಬಾರಿಸಿದ್ದು, ಕೆನ್ನೆ ಊದಿಕೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಪುಟ್ಟ ಮಕ್ಕಳ ಮೇಲೆ ಮನಸ್ಸಿಗೆ ಬಂದ ಹಾಗೆ ಬಾರಿಸಿದ ಶಿಕ್ಷಕಿ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

