ಒಂದು ವರ್ಷದೊಳಗಿನ ಮಗುವಿಗೆ ಅಪ್ಪಿತಪ್ಪಿಯೂ ನೀಡಬೇಡಿ ಉಪ್ಪು – ಸಕ್ಕರೆ ಬೆರೆಸಿದ ಆಹಾರ…!  

ಮಗು 6 ತಿಂಗಳವರೆಗೆ ತನ್ನ ತಾಯಿಯ ಹಾಲಿನಿಂದ ಮಾತ್ರ ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ. 6 ತಿಂಗಳುಗಳ ಬಳಿಕ ಮಗುವಿಗೆ ಸ್ವಲ್ಪ ಸ್ವಲ್ಪ ಘನ ಆಹಾರವನ್ನು ಪರಿಚಯಿಸಬೇಕು. ಆ ಸಮಯದಲ್ಲಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬೇಕು. ಆದರೆ ಅನೇಕ ಬಾರಿ ನಾವು ಉಪ್ಪು ಅಥವಾ ಸಕ್ಕರೆಯಲ್ಲಿ ಸಮೃದ್ಧವಾಗಿರುವ ವಸ್ತುಗಳನ್ನು ಮಗುವಿಗೆ ತಿನ್ನಿಸುತ್ತೇವೆ. ಅದು ಬಹಳ ರುಚಿಯಾಗಿರುವುದರಿಂದ ಮಗು ಕೂಡ ಇಷ್ಟಪಟ್ಟು ತಿನ್ನುತ್ತದೆ. ಆದರೆ ಶಿಶುವಿಗೆ ಉಪ್ಪು ಅಥವಾ ಸಕ್ಕರೆ ಬೆರೆಸಿದ ಆಹಾರ ನೀಡುವುದು ಅಪಾಯಕಾರಿ. ಇದು ಆರೋಗ್ಯಕ್ಕೆ ಹಾನಿಕರ. ಒಂದು ವರ್ಷದೊಳಗಿನ ಮಕ್ಕಳಿಗೆ ಉಪ್ಪು ಮತ್ತು ಸಕ್ಕರೆಯನ್ನು ನೀಡಬಾರದು. ಯಾಕೆಂದರೆ ಇವು ಮಗುವಿನ ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ.

ಮಕ್ಕಳಿಗೆ 6 ತಿಂಗಳವರೆಗೆ ಕೇವಲ ಎದೆಹಾಲು ಕುಡಿಸಬೇಕು. ನಂತರ ಬೇಯಿಸಿದ ಹಣ್ಣು, ತರಕಾರಿಗಳನ್ನು ತಿನ್ನಿಸಬಹುದು. ಮನೆಯಲ್ಲೇ ತಯಾರಿಸಿದ ರಾಗಿ ಸ್ಲರಿಯಂತಹ ಫುಡ್‌ ಕೂಡ ನೀಡಬಹುದು. ಬಳಿಕ ಗಂಜಿ, ಖಿಚಡಿ, ಓಟ್ಸ್‌ನಂತಹ ರುಚಿಕರ ಮತ್ತು ಪೌಷ್ಟಿಕ ಆಹಾರವನ್ನು ನೀಡಬೇಕು, ಅದು ಕೂಡ ಉಪ್ಪು ಅಥವಾ ಸಕ್ಕರೆ ಇಲ್ಲದೆ. ಒಂದು ವರ್ಷದ ನಂತರ ಉಪ್ಪನ್ನು ಕ್ರಮೇಣ ಮಗುವಿನ ಆಹಾರದಲ್ಲಿ ಸೇರಿಸಬಹುದು. ಆದರೆ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ನೀಡಬೇಕು.

ಮಕ್ಕಳ ಮೂತ್ರಪಿಂಡಗಳು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿರುವುದಿಲ್ಲ. ಒಂದು ವರ್ಷದವರೆಗೆ ಮಕ್ಕಳ ಮೂತ್ರಪಿಂಡಗಳು ತುಂಬಾ ಚಿಕ್ಕದಾಗಿರುತ್ತವೆ ಮತ್ತು ದುರ್ಬಲವಾಗಿರುತ್ತವೆ. ಈ ಅವಧಿಯಲ್ಲಿ ಅವರಿಗೆ ಉಪ್ಪನ್ನು ನೀಡಿದರೆ  ಅದು ಅವರ ಮೂತ್ರಪಿಂಡಗಳಿಗೆ ಹೊರೆಯಾಗಬಹುದು. ಉಪ್ಪು ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಮಕ್ಕಳ ದುರ್ಬಲ ಮೂತ್ರಪಿಂಡಗಳು ಈ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಮೂತ್ರಪಿಂಡಗಳಿಗೆ ಹಾನಿಯನ್ನುಂಟುಮಾಡುತ್ತದೆ.

ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸಿದಾಗ ಅವರ ದೇಹದಲ್ಲಿನ ಪ್ರೋಟೀನ್ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಇದು ನಮ್ಮ ಮೂಳೆಗಳು, ಸ್ನಾಯುಗಳು ಮತ್ತು ಚರ್ಮವನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಪ್ರೋಟೀನ್ಗಳು ಸರಿಯಾಗಿ ಜೀರ್ಣವಾಗದಿದ್ದಾಗ  ಮೂಳೆಗಳು ಮತ್ತು ಸ್ನಾಯುಗಳು ದುರ್ಬಲಗೊಳ್ಳುತ್ತವೆ.

ಹೆಚ್ಚು ಸಕ್ಕರೆ ತಿನ್ನುವುದು ನಮ್ಮ ಚರ್ಮ ಮತ್ತು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ  ಬಾಲ್ಯದಲ್ಲೇ ಮಕ್ಕಳ ಹಲ್ಲುಗಳು ಹಾಳಾಗುತ್ತವೆ. ಕಣ್ಣುಗಳು ದುರ್ಬಲಗೊಳ್ಳಬಹುದು. ಆದ್ದರಿಂದ ಮಕ್ಕಳಿಗೆ ಸಕ್ಕರೆಯನ್ನು ನೀಡಬಾರದು. ಅವರಿಗೆ ಕಬ್ಬಿನ ರಸ ಅಥವಾ ಜೇನುತುಪ್ಪ ಸಾಕು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read