
ಘಟನೆ ಹಿನ್ನೆಲೆ
ರೈಲ್ವೆ ಹಳಿಗಳ ಪಕ್ಕದಲ್ಲೇ ಮೂವರು ಮಹಿಳೆಯರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ನಾಯಿಯೊಂದು ಕುರಿಗಳನ್ನು ಅಟ್ಟಾಡಿಸಿದೆ. ಬೆದರಿದ ಕುರಿಗಳು ರೈಲ್ವೇ ಹಳಿಗಳ ಮೇಲೆ ದಿಕ್ಕಾಪಾಲಾಗಿ ಓಡಿದೆ. ಇದೇ ವೇಳೆ ರೈಲೊಂದು ಬಂದಿದ್ದು, ರೈಲಿಗೆ ಸಿಲುಕಿ 92 ಕುರಿಗಳು ದಾರುಣವಾಗಿ ಸಾವನ್ನಪ್ಪಿದೆ. ಘಟನೆಯಲ್ಲಿ ಮಹಿಳೆ ಕೂದಲಮ್ಮ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೈಲ್ವೇ ಹಳಿಗಳ ಮೇಲೆ ಕುರಿಗಳು ದಾರುಣವಾಗಿ ಸತ್ತು ಬಿದ್ದಿದೆ.

