ಬೆಂಗಳೂರು : ಮೌಢ್ಯತೆ ಹೋಗಲಾಡಿಸಲು ಗೊಲ್ಲರಹಟ್ಟಿಗಳಲ್ಲಿ ಸರ್ಕಾರದಿಂದ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಕಂದಾಚಾರ, ಮೌಢ್ಯಾಚರಣೆ, ಅನಿಷ್ಠ ಪದ್ಧತಿ ನಿರ್ಮೂಲನೆ ಕಾನೂನು ಅಸ್ತ್ರದಿಂದಷ್ಟೇ ಸಾಧ್ಯವಿಲ್ಲ. ಸಮಾಜದ ಆಲೋಚನೆ ದಿಕ್ಕು ಬದಲಾಗಬೇಕು. ಅಮಾನವೀಯ ಪದ್ಧತಿ ಹಾಗೂ ವಾಮಾಚಾರಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ – 2017 ಜಾರಿಗೊಳಿಸಲಾಗಿದೆ. ಮೌಢ್ಯತೆ ಹೋಗಲಾಡಿಸಲು ಕಾನೂನಿನ ಜೊತೆಗೆ ಸಾಮಾಜಿಕ ಜಾಗೃತಿ ಕೂಡ ಮುಖ್ಯ. ಗೊಲ್ಲರಹಟ್ಟಿಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.