HomeKarnatakaತೀವ್ರ ಕುತೂಹಲ ಮೂಡಿಸಿದೆ ಬಿಜೆಪಿ ನಾಯಕರ ನಡೆ : ʻಕಾಂಗ್ರೆಸ್ ಔತಣಕೂಟʼದಲ್ಲಿ S.T ಸೋಮಶೇಖರ್, ಶಿವರಾಂ...

ತೀವ್ರ ಕುತೂಹಲ ಮೂಡಿಸಿದೆ ಬಿಜೆಪಿ ನಾಯಕರ ನಡೆ : ʻಕಾಂಗ್ರೆಸ್ ಔತಣಕೂಟʼದಲ್ಲಿ S.T ಸೋಮಶೇಖರ್, ಶಿವರಾಂ ಹೆಬ್ಬಾರ್ ಭಾಗಿ!

ಬೆಳಗಾವಿ : ರಾಜ್ಯ ಬಿಜೆಪಿಯಲ್ಲಿ ಅಸಮಾಧನದ ಹೊಗೆಯುಡುತ್ತಿರುವ ಹೊತ್ತಲ್ಲೇ ಬಿಜೆಪಿ ಪ್ರಮುಖ ನಾಯಕರಿಬ್ಬರು ಕಾಂಗ್ರೆಸ್‌ ಔತಣಕೂಟದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಶಾಸಕ S.T ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಔತಣಕೂಟದಲ್ಲಿ ಭಾಗವಹಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ ಶಾಸಕರಿಗೆ ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟದಲ್ಲಿ ಬಿಜೆಪಿ ಶಾಸಕ ಎಸ್‌. ಟಿ ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಅವರು ಭಾಗವಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿಯಲ್ಲಿ ಅಸಮಾಧನಗೊಂಡಿರುವ ಎಸ್‌ ಟಿ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆಯ ನಡುವೆಯೇ ಕಾಂಗ್ರೆಸ್‌ ಔತಣಕೂಟದಲ್ಲಿ ಭಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular