ಮಂಗಳೂರು: ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಎಸ್.ಡಿ.ಪಿ.ಐ. ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಾವರ್ಕರ್ ಫೋಟೋ ವಿಚಾರದಲ್ಲಿ ಯು.ಟಿ. ಖಾದರ್ ನೀಡಿದ ಹೇಳಿಕೆಯ ಬಗ್ಗೆ ಫೇಸ್ಬುಕ್ ನನಲ್ಲಿ ಎಸ್.ಡಿ.ಪಿ.ಐ. ಮುಖಂಡ ರಿಯಾಜ್ ಕಡಂಬು ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಆತನನ್ನು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದು ಊರ್ವ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ತೆರವುಗೊಳಿಸುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು, ಸ್ವೀಕರ್ ಖಾದರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ನನ್ನ ಕೆಲಸ ಜೋಡಿಸುವುದು ಕಿತ್ತು ಬಿಸಾಕುವುದಲ್ಲ ಎಂದು ಹೇಳಿ ವಿವಾದ ತಣ್ಣಗಾಗಿಸಿದ್ದರು. ಖಾದರ್ ಅವರು ನೀಡಿದ ಹೇಳಿಕೆಯ ವಿರುದ್ಧ ಫೇಸ್ಬುಕ್ ನಲ್ಲಿ ರಿಯಾಜ್ ಕುಹಕದ ಪೋಸ್ಟ್ ಹಾಕಿದ್ದರು. ಕಾಂಗ್ರೆಸ್ ಮುಖಂಡರು ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.