HomeIndia'ಸಾಯುತ್ತೇನೆ ಹೊರತೂ ದೆಹಲಿಗೆ ಹೋಗಲ್ಲ': ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮರು ದಿನವೇ ಶಿವರಾಜ್ ಸಿಂಗ್...

‘ಸಾಯುತ್ತೇನೆ ಹೊರತೂ ದೆಹಲಿಗೆ ಹೋಗಲ್ಲ’: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮರು ದಿನವೇ ಶಿವರಾಜ್ ಸಿಂಗ್ ಚೌಹಾಣ್ ಸ್ಪೋಟಕ ಹೇಳಿಕೆ

ಭೋಪಾಲ್: ಭಾರತೀಯ ಜನತಾ ಪಕ್ಷದ ಹೊಸ ಸಿಎಂ ಆಯ್ಕೆಯಾಗಿರುವ ಮೋಹನ್ ಯಾದವ್‌ ಗೆ ದಾರಿ ಮಾಡಿಕೊಡಲು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಒಂದು ದಿನದ ನಂತರ, ಶಿವರಾಜ್ ಚೌಹಾಣ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಯಾವುದೇ ಹೊಸ ಪಾತ್ರಕ್ಕಾಗಿ ದೆಹಲಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ಹಳೆಯ ನಾಯಕತ್ವ ಬದಲಾವಣೆ ಮಾಡಿದ್ದರಿಂದ ಮಧ್ಯಪ್ರದೇಶ ರಾಜಕೀಯದಲ್ಲಿ ಪಕ್ಷದ ವರಿಷ್ಠ ಶಿವರಾಜ್ ಚೌಹಾಣ್ ಅವರ ಭವಿಷ್ಯದ ಪಾತ್ರದ ಬಗ್ಗೆ ಪ್ರಶ್ನೆಗಳು ಮುಂಚೂಣಿಯಲ್ಲಿವೆ. ಮೋದಿ ಸರ್ಕಾರದಲ್ಲಿ ದೊಡ್ಡ ಪಾತ್ರಕ್ಕಾಗಿ ಕೇಂದ್ರ ನಾಯಕತ್ವವು ಚೌಹಾಣ್ ಅವರನ್ನು ದೆಹಲಿಗೆ ಕರೆತರುತ್ತದೆ ಎಂದು ಹೇಳಲಾಗಿತ್ತು. ಇಂತಹ ಊಹಾಪೋಹಗಳಿಗೆ ತೆರೆ ಎಳೆದ ಚೌಹಾಣ್, ಸಾಯುತ್ತೇನೆ ಹೊರತೂ ದೆಹಲಿಗೆ ಹೋಗುವುದಿಲ್ಲ ಎಂದು ರಾಜಕೀಯ ಭವಿಷ್ಯದ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಜೆಪಿಯು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಕ್ಕಿಂತ ಸಂತೋಷ ಏನಿದೆ. 2023 ರಲ್ಲಿ ಮತ್ತೊಮ್ಮೆ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದೆ ಎಂಬ ತೃಪ್ತಿ ಇದೆ. ನನ್ನ ಹೃದಯವು ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ ಎಂದು ಚೌಹಾಣ್ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular