HomeKarnatakaSHOCKING: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿತ

SHOCKING: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿತ

ಬೆಂಗಳೂರು: ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿಷ್ಠಿತ ಕಾಲೇಜಿನ ಎಲ್.ಎಲ್.ಬಿ. ವಿದ್ಯಾರ್ಥಿನಿ ಅಮೃತಾ(19) ಗಾಯಗೊಂಡವರು. ಕೋಡಿಹಳ್ಳಿ ನಿವಾಸಿಯಾಗಿರುವ ಅಮೃತಾ ಹುಲ್ಲಹಳ್ಳಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ಅಂಗಡಿಯೊಂದರಲ್ಲಿ ಚಾಕೊಲೇಟ್ ಖರೀದಿಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಲು ಮುಂದಾದಾಗ ಆಕೆಯ ಮೊಬೈಲ್ ಕಸಿದುಕೊಂಡ ಆರೋಪಿ ಓಡಿ ಹೋಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತನ ಹಿಂದೆ ಓಡಿದ ಅಮೃತಾ ಕುತ್ತಿಗೆ ಹಿಡಿದುಕೊಂಡಿದ್ದಾಳೆ. ಈ ವೇಳೆ ಆರೋಪಿ ವಿದ್ಯಾರ್ಥಿನಿಯನ್ನು ತಳ್ಳಿ ಮತ್ತೆ ಪರಾರಿಯಾಗಿದ್ದಾನೆ. ಅಮೃತಾ ಕೂಗಿಕೊಂಡಾಗ ಆರೋಪಿ ಚಾಕು ತೆಗೆದು ಅಮೃತಾ ಅವರ ಎಡಗೈಗೆ ಹೊಡೆದಿದ್ದಾನೆ. ರಕ್ತ ಗಾಯವಾಗಿ ಅಮೃತಾ ಅಳುತ್ತಿದ್ದಾಗ ಸಹಚರರೊಂದಿಗೆ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸ್ಥಳೀಯರು ಅಮೃತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಾಗಿ ಶೋಧ ನಡೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular