HomeIndiaVideo | ಮೆಟ್ರೋ ಸೇತುವೆ ಮೇಲಿಂದ ಹಾರಲೆತ್ನಿಸಿದ ಯುವತಿ; ಪೊಲೀಸರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು...!

Video | ಮೆಟ್ರೋ ಸೇತುವೆ ಮೇಲಿಂದ ಹಾರಲೆತ್ನಿಸಿದ ಯುವತಿ; ಪೊಲೀಸರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು…!

article-image

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಮೆಟ್ರೋ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವತಿಯನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಇಂತಹುದೊಂದು ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಹಾಡಹಗಲೇ ಈ ಯುವತಿ ಮೆಟ್ರೋ ಸೇತುವೆ ಮೇಲೇರಿದ್ದು, ಮೊಬೈಲ್ ನಲ್ಲಿ ಯಾರೊಂದಿಗೋ ಮಾತನಾಡುತ್ತಲೇ ಹಾರಲು ಮುಂದಾಗಿದ್ದಾಳೆ. ಈ ದೃಶ್ಯವನ್ನು ನೋಡಿದ ಜನ ಹಾಗೆ ಮಾಡದಂತೆ ಕೂಗಿ ಕೂಗಿ ಎಚ್ಚರಿಸಿದ್ದಾರೆ. ಅಲ್ಲದೆ ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣವೇ ಎಚ್ಚೆತ್ತ ಪೊಲೀಸರು ಮೆಟ್ರೋ ರೈಲಿನ ಮೂಲಕವೇ ಯುವತಿಯನ್ನು ಸಮೀಪಿಸಿದ್ದಾರೆ. ಆ ಸಂದರ್ಭದಲ್ಲಿ ಇನ್ನೇನು ಆಕೆ ಮೇಲಿನಿಂದ ಹಾರುತ್ತಾಳೆ ಎನ್ನುವಾಗ ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಈ ಯುವತಿ ಯಾರು ? ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು ? ಎಂಬುದರ ಕುರಿತು ಹೆಚ್ಚಿನ ವಿವರ ಲಭ್ಯವಾಗಿಲ್ಲ.

 

https://twitter.com/AG_Journalist/status/1734387577505939698?ref_src=twsrc%5Etfw%7Ctwcamp%5Etweetembed%7Ctwterm%5E1734387577505939698%7Ctwgr%5E3a3aba85b5201d640cc12a537ddfeee2a23eadab%7Ctwcon%5Es1_&ref_url=https%3A%2F%2Fwww.freepressjournal.in%2Findia%2Fvideo-delhi-woman-attempts-suicide-by-jumping-off-metro-bridge-rescued-by-police-in-nick-of-time

For Latest News Updates, Join Our Whatsapp Community🚩
RELATED ARTICLES

Most Popular