HomeHealthಒಡೆದ ಹಾಲನ್ನು ಎಸೆಯುವ ಬದಲು ಈ 5 ಕೆಲಸಕ್ಕೆ ಬಳಸಿ…!

ಒಡೆದ ಹಾಲನ್ನು ಎಸೆಯುವ ಬದಲು ಈ 5 ಕೆಲಸಕ್ಕೆ ಬಳಸಿ…!

ಕೆಲವೊಮ್ಮೆ ಕಾಯಿಸುವ ಸಂದರ್ಭದಲ್ಲಿ ಹಾಲು ಒಡೆದು ಹೋಗುವುದು ಸಾಮಾನ್ಯ. ಮೊಸರಿನಂತಾಗುವ ಒಡೆದ ಹಾಲನ್ನು ಅನೇಕರು ಬಳಸುವುದೇ ಇಲ್ಲ. ಅದು ವೇಸ್ಟ್‌ ಎಂದುಕೊಂಡು ಬಿಸಾಡಿಬಿಡುತ್ತಾರೆ. ಆದರೆ ಈ ಒಡೆದ ಹಾಲು ಕೂಡ ಬಹಳ ಉಪಯುಕ್ತವಾದದ್ದು. ಅದನ್ನು ಎಸೆಯುವ ಬದಲು ಅನೇಕ ರೆಸಿಪಿಗಳಲ್ಲಿ ಕೂಡ ಬಳಸಬಹುದು.

ಒಡೆದ ಹಾಲನ್ನು ಸ್ಮೂಥಿ ಅಥವಾ ಮಿಲ್ಕ್‌ ಶೇಕ್ ಮಾಡಲು ಬಳಸಬಹುದು. ಈ ರೀತಿಯಾಗಿ ಮಾಡುವುದರಿಂದ ಅದು ವ್ಯರ್ಥವಾಗುವುದಿಲ್ಲ. ಇನ್ನೊಂದಕ್ಕೆ ಬಳಸಲ್ಪಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಡೆದ ಹಾಲಿನಿಂದ ಅನೇಕ ಆರೋಗ್ಯಕರ ವಸ್ತುಗಳನ್ನು ತಯಾರಿಸಬಹುದು. ಆರೋಗ್ಯಕರ ತಿಂಡಿಗಳನ್ನು ಮಾಡಬಹುದು ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಎಗ್‌ ಕರಿಯಲ್ಲಿ ಬಳಸಬಹುದು. ಒಡೆದ ಹಾಲನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಮುಖ ಸ್ವಚ್ಛವಾಗುತ್ತದೆ ಮತ್ತು ತ್ವಚೆಗೆ ಸಾಕಷ್ಟು ಹೊಳಪು ಬರುತ್ತದೆ.

ಅಷ್ಟೇ ಅಲ್ಲ ಒಡೆದ ಹಾಲನ್ನು ಬಳಸಿ ಮೃದುವಾದ ರೊಟ್ಟಿ, ಚಪಾತಿಗಳನ್ನು ಮಾಡಿ ತಿನ್ನಿ. ನೀರಿನ ಬದಲು ಇದನ್ನು ಬಳಸಿ ಹಿಟ್ಟನ್ನು ಕಲಸುವುದರಿಂದ ಚಪಾತಿ ತುಂಬಾ ಮೃದುವಾಗಿರುತ್ತದೆ. ರುಚಿ ಕೂಡ ದುಪ್ಪಟ್ಟಾಗುತ್ತದೆ.

ಪಲ್ಯ ತುಂಬಾ ತೆಳುವಾಗಿದ್ದರೆ ಅದನ್ನು ಕೊಂಚ ಗಟ್ಟಿ ಮಾಡಲು ಕೂಡ ಒಡೆದ ಹಾಲನ್ನು ಬಳಸಬಹುದಾಗಿದೆ. ಪಲ್ಯಕ್ಕೆ ಒಡೆದ ಹಾಲನ್ನು ಬೆರೆಸಿ.

For Latest News Updates, Join Our Whatsapp Community🚩
RELATED ARTICLES

Most Popular