HomeIndiaಪಾದಚಾರಿ ಮುಂದೆಯೇ ನುಗ್ಗಿ ಹೋಯ್ತು ಹುಲಿ; ಎದೆ ನಡುಗಿಸುವ ವಿಡಿಯೋ ವೈರಲ್....!

ಪಾದಚಾರಿ ಮುಂದೆಯೇ ನುಗ್ಗಿ ಹೋಯ್ತು ಹುಲಿ; ಎದೆ ನಡುಗಿಸುವ ವಿಡಿಯೋ ವೈರಲ್….!

ಅದು ನಿಜಕ್ಕೂ ನಿಮ್ಮ ಎದೆ ನಡುಗಿಸುವ ದೃಶ್ಯ. ಸಾವಿನ ಅಂಚಿದ ಪಾರಾದ ಕ್ಷಣ. ಹುಲಿಯ ಬಾಯಿಂದ ಪಾರಾದ ಈ ವ್ಯಕ್ತಿಗೆ ಮರುಜೀವ ಸಿಕ್ಕಂತ ಘಳಿಗೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿರುತ್ತಾರೆ. ಇದಕ್ಕಿದ್ದಂತೆ ಗಾಬರಿಗೊಂಡ ಅವರು ಹಿಂದಕ್ಕೆ ತಿರುಗಿ ನೋಡ್ತಿದ್ದಂತೆ, ಕೆಲವೇ ಸೆಕೆಂಡುಗಳಲ್ಲಿ ಹುಲಿಯೊಂದು ಪೊದೆಯಿಂದ ನುಗ್ಗಿ ರಸ್ತೆ ದಾಟುತ್ತಾ ಹೋಗುತ್ತದೆ. ಪಾದಚಾರಿ ಇದನ್ನು ನೋಡುತ್ತಾ ಹಿಮ್ಮುಖನಾಗುತ್ತಾನೆ. ತಕ್ಷಣ ಹಲವು ಮಂದಿ ಈ ದೃಶ್ಯ ಕಂಡು ರಸ್ತೆಗೆ ಓಡಿ ಬರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿಯ ಪ್ರಕಾರ, ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ಈ ಘಟನೆ ನಡೆದಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಹಂಚಿಕೊಂಡಿರುವ ವಿಸ್ಮಯಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪಾದಚಾರಿಯನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular