HomeKarnatakaBIG NEWS: ಸಾವರ್ಕರ್ ಮಾತ್ರವಲ್ಲ ಗಾಂಧಿ ಫೋಟೋವನ್ನು ತೆಗೆಯಬೇಕು ಎಂದ ನಟ; ಹೊಸ ವಿವಾದ ಹುಟ್ಟುಹಾಕಿದ...

BIG NEWS: ಸಾವರ್ಕರ್ ಮಾತ್ರವಲ್ಲ ಗಾಂಧಿ ಫೋಟೋವನ್ನು ತೆಗೆಯಬೇಕು ಎಂದ ನಟ; ಹೊಸ ವಿವಾದ ಹುಟ್ಟುಹಾಕಿದ ಚೇತನ್ ಅಹಿಂಸಾ ಹೇಳಿಕೆ

ಬೆಂಗಳೂರು: ಸಾವರ್ಕರ್ ಫೋಟೋ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ-ವಿಪಕ್ಷ ನಾಯಕರ ವಾಗ್ವಾದಗಳ ನಡುವೆಯೇ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಮತ್ತೊಂದು ಹೊಸ ವಿವಾದ ಹುಟುಹಾಕಿದ್ದು, ಇನ್ನೊಂದು ಚರ್ಚೆಗೆ ಕಾರಣವಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿನ ಸಾವರ್ಕರ್ ಫೋಟೋವನ್ನು ತೆಗೆಯಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ನಟ ಚೇತನ್ ಅಹಿಂಸಾ, ಸಾವರ್ಕರ್ ಹಾಗೂ ಗಾಂಧಿ ಇಬ್ಬರ ಫೋಟೋಗಳನ್ನು ತೆಗೆಯಬೇಕು ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳುತ್ತಾರೆ, ‘ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ; ಅದನ್ನು ನನಗೆ ಬಿಟ್ಟರೆ ಇವತ್ತೇ ತೆಗೆಯುತ್ತೇನೆ’ ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು; ನಮ್ಮಂತ ಸಮಾನತಾವಾದಿಗಳಿಗೆ, ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ ಶತ್ರುಗಳು ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದುಹಾಕುವುದು ಸೂಕ್ತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲವಾದರೆ, ಇಬ್ಬರನ್ನೂ ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಸೇರಿಸಿ ಎಂದು ಹೇಳಿದ್ದಾರೆ. ನಟ ಚೇತನ್ ಅವರ ಈ ಹೇಳಿಕೆ ಮತ್ತೊಂದು ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular