
ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ವಕೀಲರು, ಹತ್ಯೆ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಬೇಕು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಕೋರ್ಟ್ ಗೆ ಹೋಗುತ್ತಿದ್ದ ವಕೀಲ ಈರಣ್ಣಗೌಡ ಪಾಟೀಲ್ ಎಂಬುವವರನ್ನು ಇಂದು ಬೆಳಿಗ್ಗೆ ದುಷ್ಕರ್ಮಿಗಳು ಅರ್ಧ ಕಿ.ಮೀವರೆಗೆ ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಬಂದು ಸಾಯಿಮಂದಿರ ಬಳಿಯ ಅಪಾರ್ಟ್ ಮೆಂಟ್ ಬಳಿ ಹತ್ಯೆ ಮಾಡಿದ್ದರು.
40 ವರ್ಷದ ವಕೀಲರೊಬ್ಬರನ್ನು ಅವರ ಅಪಾರ್ಟ್ಮೆಂಟ್ ಬಳಿ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತರನ್ನು ಹಿರಣ್ಣ ಗೌಡ ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

