HomeKarnatakaನಾನು ಜಾಮೀನು ಪಡೆಯೋಕ್ಕೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನ್ನಲ್ಲ : ಡಿಕೆಶಿಗೆ...

ನಾನು ಜಾಮೀನು ಪಡೆಯೋಕ್ಕೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನ್ನಲ್ಲ : ಡಿಕೆಶಿಗೆ ಯತ್ನಾಳ್ ತಿರುಗೇಟು

ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರನ್ನು ನಿಮ್ಹಾನ್ಸ್‌ ಗೆ ಸೇರಿಸಬೇಕು ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಯತ್ನಾಳ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ತಿರುಗೇಟು ನೀಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ನನ್ನನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದಿರುವ “ಭ್ರಷ್ಟಾಚಾರ ಆರೋಪಿ” ಮೊದಲು “ನಾರಾಯಣ ಹೃದಯಾಲಯದಲ್ಲಿ” ಬೆಡ್ ಬುಕ್ ಮಾಡಿಕೊಳ್ಳಲಿ. ಮತ್ತೆ ಜಾಮೀನು ಪಡೆಯೋಕ್ಕೆ ಇನ್ನೊಂದು ನಾಟಕ ಮಾಡಬೇಕಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಮೀನು ಪಡೆಯೋಕ್ಕೆ ನ್ಯಾಯಾಲಯದ ಮುಂದೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನ್ನಲ್ಲ ಈ ಬಸನಗೌಡ ಪಾಟೀಲ್ ನ್ಯಾಯಕ್ಕಾಗಿ ಏನು ಬೇಕಾದರೂ  ಎದುರಿಸುವ ನಾಯಕ ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular