alex Certify BIG NEWS: ಸಾಕಾನೆ ಅರ್ಜುನ ಸಾವು ಬೆನ್ನಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಕಾನೆ ಅರ್ಜುನ ಸಾವು ಬೆನ್ನಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾಕಾನೆ ಅರ್ಜುನ ಸಾವು ಪ್ರಕರಣ ಬೆನ್ನಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ.

ಸಾಕಾನೆಗಳನ್ನು ಬಳಸಿಕೊಂಡು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಳಿ ಕಡಾನೆ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಎರಡು ದಿನಗಳ ಹಿಂದೆ ಕಾಡಾನೆ ಜೊತೆ ಕಾದಾಟದ ವೇಳೆ ದಸರಾ ಆನೆಯೂ ಆಗಿರುವ ಅರ್ಜುನ ಸಾವನ್ನಪ್ಪಿದೆ. ಅಂರ್ಜುನ ಆನೆಯ ಅಂತ್ಯಕ್ರಿಯೆ ನೇರವೇರಿದ್ದು, ಅರ್ಜುನ ಆನೆ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಈ ನಡುವೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಾಕಾನೆ ಭೀಮ, ಅಶ್ವತ್ಥಾಮ, ಧನಂಜಯ ಆನೆಗಳು ಕ್ಯಾಂಪ್ ಗೆ ಮರಳಿವೆ. ಇನ್ನು ಕಾರ್ಯಾಚರಣೆ ವೇಳೆ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, 6 ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...