HomeKarnatakaSHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ತಂಗಿಯ 6 ವರ್ಷದ ಮಗನನ್ನೇ ಕೊಂದು...

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ತಂಗಿಯ 6 ವರ್ಷದ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ

ಚಿಕ್ಕಬಳ್ಳಾಪುರ : ಆರು ವರ್ಷದ ಬಾಲಕನನ್ನು ತಾಯಿಯ ಅಕ್ಕನೇ ಅಪಹರಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುತ್ತುಕಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆರೋಪಿ ಅಂಬಿಕಾ ಮತ್ತು ಮೃತ ಬಾಲಕನ ತಾಯಿ ಅನಿತಾ ಸಹೋದರಿಯರು. ಅನಿತಾ ಮೇಲಿನ ಸಿಟ್ಟಿಗೆ ಅಂಬಿಕಾ ಸಹೋದರಿಯ ಮಗನನ್ನು ಕೊಂದು ಶವವನ್ನು ಚಿಕ್ಕಬಳ್ಳಾಪುರದ ಜಮೀನಿನಲ್ಲಿ ಹೂತುಹಾಕಿದ್ದಾಳೆ ಎಂದು ವರದಿ ತಿಳಿಸಿದೆ.

ಅಂಬಿಕಾಳ ಅನೈತಿಕ ಸಂಬಂಧಕ್ಕೆ ಅನಿತಾ ಅಡ್ಡಿಯಾಗುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ಅಂಬಿಕಾ ತಂಗಿ ಮೇಲಿನ ಕೋಪಕ್ಕೆ ಏನೂ ಅರಿಯದ 6 ವರ್ಷದ ಕಂದಮ್ಮನ್ನು ಕೊಲೆ ಮಾಡಿ ಶವವನ್ನು ಜಮೀನಿನಲ್ಲಿ ಹೂತು ಹಾಕಿದ್ದಾಳೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಬ್ಬನ್ ಪಾರ್ಕ್ ಪೊಲೀಸರು ಮಹಿಳೆಯನ್ನು ಬಂಧಿಸಿ ಪೆರೇಸಂದ್ರ ಪೊಲೀಸರಿಗೆ ಒಪ್ಪಿಸಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಆಟೋ ರಿಕ್ಷಾ ಚಾಲಕ ನೀಡಿದ ಮಾಹಿತಿಯ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular