HomeIndiaBREAKING : ದೇಶದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ‘ಗರೀಬ್ ಕಲ್ಯಾಣ ಅನ್ನಭಾಗ್ಯ...

BREAKING : ದೇಶದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ‘ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆ’ 5 ವರ್ಷ ವಿಸ್ತರಣೆ

ಕೇಂದ್ರ ಸರ್ಕಾರ ‘ಗರೀಬ್ ಕಲ್ಯಾಣ ಅನ್ನಭಾಗ್ಯ ಯೋಜನೆ ಜ.1, 2024ರಿಂದ ’ 5 ವರ್ಷ ವಿಸ್ತರಣೆ ಮಾಡಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಮೋದಿ ಸರ್ಕಾರ ಅನುಮೋದನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಲು ಅನುಮೋದನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋವಿಡ್ ಕಾಲದಲ್ಲಿ ಬಡವರ ಹಸಿವು ನೀಗಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಬಗ್ಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಶ್ಲಾಘಿಸಿತ್ತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡವರಿಗೆ ಆಹಾರ ಒದಗಿಸುವ ಮೂಲಕ ಕಡುಬಡತನದಿಂದ ದೇಶವಾಸಿಗಳನ್ನು ಪಾರು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು. ವರದಿಯ ಪ್ರಕಾರ ಭಾರತದಲ್ಲಿ ದಿನಕ್ಕೆ 142 ರೂಪಾಯಿಗಿಂತ ಕಡಿಮೆ ಸರಾಸರಿ ಆದಾಯ ಇರುವ ಕಡುಬಡವರ ಸಂಖ್ಯೆ ಕೊರೋನಾ ಬಿಕ್ಕಟ್ಟಿನ 2020ರ ವರ್ಷದಲ್ಲಿಯೂ ಕೊರೋನಾ ಪೂರ್ವ 2019ರ ಮಟ್ಟದಲ್ಲಿ ಉಳಿದುಕೊಂಡಿದೆ. ಗರೀಬ್ ಕಲ್ಯಾಣ ಯೋಜನೆ ಬಡತನವನ್ನು ದೂರ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular