alex Certify ರೈತರಿಗೆ ಗುಡ್ ನ್ಯೂಸ್: ಬರ ಪರಿಹಾರ ಸೇರಿ ಯೋಜನೆಗಳ ಸೌಲಭ್ಯ ಪಡೆಯಲು ಸಾಗುವಳಿ ಜಮೀನು ವಿವರ ಸೇರ್ಪಡೆ ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಬರ ಪರಿಹಾರ ಸೇರಿ ಯೋಜನೆಗಳ ಸೌಲಭ್ಯ ಪಡೆಯಲು ಸಾಗುವಳಿ ಜಮೀನು ವಿವರ ಸೇರ್ಪಡೆ ಅಭಿಯಾನ

ಶಿವಮೊಗ್ಗ: ರೈತರು ಬರ ಪರಿಹಾರ, ಬೆಳೆವಿಮೆ, ಬೆಂಬಲ ಬೆಲೆ ಯೋಜನೆ ಹಾಗೂ ಇನ್ನಿತರೆ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್(FRUITS)) ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು ಕಡ್ಡಾಯವಾಗಿದ್ದು, ರೈತರು ಜಮೀನಿನ ಎಲ್ಲಾ ದಾಖಲಾತಿಗಳನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 5,11,258 ಕೃಷಿ ಯೋಗ್ಯ ತಾಕುಗಳಿದ್ದು(ಸರ್ವೇ ನಂ/ಪೋಡು) ಅವುಗಳಲ್ಲಿ ಈಗಾಗಲೇ 3,28,807 ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. 1,90,749 ತಾಕುಗಳ ನೋಂದಣಿ ಬಾಕಿ ಇರುತ್ತದೆ.

ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳು ಈಗಾಗಲೇ ಬರಪೀಡಿತ ಎಂದು ಘೋಷಣೆಯಾಗಿರುವುದರಿಂದ ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಒಟ್ಟು ವಿಸ್ತೀರ್ಣ ಮತ್ತು ಬೆಳೆ ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ಬೆಳೆ ನಷ್ಟ ಪರಿಹಾರ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಕಾರಣ ಎಲ್ಲ ರೈತರು ತಾವು ಹೊಂದಿರುವ ಜಮೀನಿನ ಎಲ್ಲಾ ಸರ್ವೇ ನಂಬರುಗಳನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡುವಂತೆ ಈ ಮೂಲಕ ತಿಳಿಯಪಡಿಸಿದೆ.

ತಾವು ಹೊಂದಿರುವ ಜಮೀನಿನ ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳೊಂದಿಗೆ ಕೃಷಿ ಇಲಾಖೆ(ಹೋಬಳಿ ರೈತ ಸಂಪರ್ಕ ಕೇಂದ್ರ), ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕು.

ನೋಂದಣಿಯಾಗದ ಸರ್ವೇ ನಂ. ವಿವರ:

ಶಿವಮೊಗ್ಗ ತಾಲ್ಲೂಕಿನಲ್ಲಿ 34,000, ಭದ್ರಾವತಿ 35,791, ತೀರ್ಥಹಳ್ಳಿ 25,713, ಸಾಗರ 30,913, ಹೊಸನಗರ 11,651, ಶಿಕಾರಿಪುರ 26,551 ಮತ್ತು ಸೊರಬ 26,130.

ಜಿಲ್ಲೆಯಾದ್ಯಂತ ಫ್ರೂಟ್ಸ್ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೈತ ಬಾಂಧವರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ವಿವರಗಳನ್ನು ಈ ಕೂಡಲೇ ಜೋಡಣೆ ಮಾಡಲು ತಮ್ಮ ಗ್ರಾಮದ ಆಡಳಿತಾಧಿಕಾರಿಗಳು, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...