HomeKarnatakaಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ : ʻಸ್ಮಾರ್ಟ್ ಪೋನ್ʼ ಗೆ ಕರೆನ್ಸಿ ಭಾಗ್ಯ

ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ : ʻಸ್ಮಾರ್ಟ್ ಪೋನ್ʼ ಗೆ ಕರೆನ್ಸಿ ಭಾಗ್ಯ

ಉಡುಪಿ : ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್‌ ಗೆ ತಿಂಗಳಾಂತ್ಯದಲ್ಲಿ ಕರೆನ್ಸಿ ನೀಡಲು ಮುಂದಾಗಿದೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು, ಕೇಂದ್ರ ಸರ್ಕಾರದ ಪೋಷನ್‌ ಅಭಿಯಾನದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಸ್ಮಾರ್ಟ ಫೋನ್‌ ಗಳಿಗೆ ಕಳೆದ ನಾಲ್ಕು ತಿಂಗಳುಗಳಿಂದ ಹಣ ಬಿಡುಗಡೆ ಆಗಿಲ್ಲ. ಈಗ ತಿಂಗಳಾಂತ್ಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೋಷಣ್‌ ಅಭಿಯಾನದಡಿಯಲ್ಲಿ ಗರ್ಭಿಣಿಯರ ದಾಖಲಾತಿ, ಆರೋಗ್ಯ, ಮಕ್ಕಳ ದಾಖಲಾತಿ, ಆರೋಗ್ಯ, ಆಹಾರ ವಿತರಣೆ ಮಾಹಿತಿ ಅಪ್‌ ಲೋಡ್‌ ಮಾಡಬೇಕು. ಆದರೆ ಮೊಬೈಲ್‌ ಗೆ ಕರೆನ್ಸಿ ಇಲ್ಲದ ಕಾರಣ ನಾಲ್ಕೈದು ತಿಂಗಳಿನಿಂದ ತೊಂದರೆ ಅನುಭವಿಸುವಂತಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular