ಬೆಂಗಳೂರು : ರಾಜ್ಯ ಸರ್ಕಾರವು ಜನತೆಗೆ ಬಿಗ್ ಶಾಕ್ ನೀಡಿದ್ದು, ಜನನ,ಮರಣ ಪ್ರಮಾಣಪತ್ರದ ವಿಳಂಬ ಶುಲ್ಕವನ್ನು ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಭಾರತ ಸರ್ಕಾರದ ಜನನ, ಮರಣಗಳ ನೋಂದಣಿ (ತಿದ್ದುಪಡಿ) ಅಧಿನಿಯಮ 2023ಕ್ಕೆ ಅನುಗುಣವಾಗಿ ಕರ್ನಾಟಕ ಜನನ, ಮರಣಗಳ ನೋಂದಣಿ ನಿಯಮ 9ಕ್ಕೆ ತಿದ್ದುಪಡಿ ಮಾಡಿ, ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 2023 ರನ್ನು ಉಲ್ಲೇಖ (2) ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ.
ಉಲ್ಲೇಖ (2)ರ ಅಧಿಸೂಚನೆಯನ್ವಯ ಒಂದು ವರ್ಷದ ನಂತರ ನೋಂದಾಯಿಸುವ ಜನನ, ಮರಣ ಘಟನೆಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಯ (Presidency Magistrate) ಆದೇಶದ ಬದಲಿಗೆ ಇನ್ನು ಮುಂದೆ ಕಂದಾಯ ಇಲಾಖೆಯ ಉಪ ವಿಭಾಗಧಿಕಾರಿ ಅವರ ಆದೇಶವನ್ನು ಪಡೆಯುವ ಬಗ್ಗೆ ವಿಳಂಬ ಹಾಗೂ ಶುಲ್ಕವನ್ನು ಕ್ರಮವಾಗಿ 9(1), 9(2) ಮತ್ತು 9(3)ಕ್ಕೆ ರೂ. 100/, ರೂ. 200 ಮತ್ತು ರೂ. 500 ಗಳಿಗೆ ಪರಿಷ್ಕರಿಸಲಾಗಿದೆ.