ತೆಲಂಗಾಣ ಪ್ರಚಾರಕ್ಕೆ ತೆರಳಿದ್ದ ಸಚಿವ ಜಮೀರ್ ಗೆ ಶಾಕ್: ಅಕ್ರಮ ಹಣ ಸಾಗಣೆ ಶಂಕೆಯಡಿ ಪೊಲೀಸ್ ದಾಳಿ

ಹೈದರಾಬಾದ್: ಸಚಿವ ಬಿ.ಎ. ಜಮೀರ್ ಅಹ್ಮದ್ ಖಾನ್ ಅವರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳಿದ್ದು, ಅವರು ತಂಗಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ತಡರಾತ್ರಿ ಹೋಟೆಲ್ ಮೇಲೆ ಹೈದರಾಬಾದ್ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮವಾಗಿ ಹಣ ಸಾಗಾಟ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಜಮೀರ್ ಅಹಮ್ಮದ್ ಅವರು, ತಡರಾತ್ರಿ ನಡೆದ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದರು ಮತ್ತು ಅವರು ಯಾವುದೇ ಕುರುಹು ಇಲ್ಲದೆ ಹಿಂತಿರುಗಿದರು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿಯನ್ನು ಪ್ರಾರಂಭಿಸಿದೆ. ಇದು ನಮ್ಮನ್ನು ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರವಾಗಿದೆ, ಆದರೆ ನಾವು ಇದಕ್ಕೆ ಹೆದರುವುದಿಲ್ಲ.’ ಎಂದು ತಿಳಿಸಿದ್ದಾರೆ.

https://fb.watch/outFtXI37Q/

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read