HomeKarnatakaಜಗಳ ಬಿಡಿಸಲು ಬಂದ ಪೊಲೀಸ್ ವಾಹನವನ್ನೇ ಕದ್ದೊಯ್ದ ಭೂಪ: ಕಕ್ಕಾಬಿಕ್ಕಿಯಾದ ಪೊಲೀಸರು

ಜಗಳ ಬಿಡಿಸಲು ಬಂದ ಪೊಲೀಸ್ ವಾಹನವನ್ನೇ ಕದ್ದೊಯ್ದ ಭೂಪ: ಕಕ್ಕಾಬಿಕ್ಕಿಯಾದ ಪೊಲೀಸರು

ತುಮಕೂರು: ಜಗಳ ಬಿಡಿಸಲು ಬಂದ ಪೊಲೀಸ್ ವಾಹನವನ್ನು ವ್ಯಕ್ತಿಯೊಬ್ಬ ಕದ್ದುಕೊಂಡು ಹೋಗಿದ್ದಾನೆ. ಇದರಿಂದಾಗಿ ಪೊಲೀಸರು ಹೈರಾಣಾಗಿದ್ದಾರೆ. ಸೋಮವಾರ ತಡರಾತ್ರಿ ಗುಬ್ಬಿ ತಾಲೂಕು ಸಿ.ಎಸ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾರನಹಳ್ಳಿಯಲ್ಲಿ ಘಟನೆ ನಡೆದಿದೆ.

ಮುನಿಯ ಮತ್ತು ಆತನ ಸಹೋದರನ ನಡುವೆ ಜಗಳ ನದಿದೆ. ಜಗಳದ ವೇಳೆ ಮುನಿಯನ ಸಹೋದರ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಜಗಳ ಬಿಡಿಸಿ ಮುನಿಯನಿಗೆ ತಿಳಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮುನಿಯ ಪೊಲೀಸರು ಸ್ಥಳಕ್ಕೆ ಬಂದಿದ್ದ 112 ಪೊಲೀಸ್ ವಾಹನದ ಹಿಂಬದಿಯ ಗಾಜು ಒಡೆದು ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಿಂದ ಕಕ್ಕಾಬಿಕ್ಕಿಯಾದ ಪೊಲೀಸರು ಇಡೀ ರಾತ್ರಿ ಮುನಿಯ ಹಾಗೂ 112 ಪೊಲೀಸ್ ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ತಮುಕೂರು ತಾಲೂಕಿನ ಹೆಬ್ಬೂರು ಗ್ರಾಮದ ಬಳಿ ವಾಹನ ಸಮೇತ ಮುನಿಯ ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular