ತಿರುಪತಿ: ಅಹಮದಾಬಾದ್ ನಲ್ಲಿ ಭಾನುವಾರ ನಡೆದ 2023 ರ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡದ ಸೋಲಿನ ನಂತರ ತಿರುಪತಿ ಮಂಡಲದ ದುರ್ಗಾಸಮುದ್ರದ ಜ್ಯೋತಿ ಕುಮಾರ್ ಯಾದವ್ ಎಂಬ ಭಾರತೀಯ ಕ್ರಿಕೆಟ್ ಅಭಿಮಾನಿ ಹೃದಯಾಘಾತದಿಂದ ನಿಧನರಾದರು.
ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರು ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಫೈನಲ್ನಲ್ಲಿ ಸೋತ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಭಾರತ ತಂಡದ ನಾಯಕ ಮಾತ್ರವಲ್ಲದೇ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಆಟಗಾರರು ಸಹ ತಮ್ಮನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದೆಲ್ಲವನ್ನು ಕಂಡ ಇಂಜಿನಿಯರ್ ಜ್ಯೋತಿ ಕುಮಾರ್ ಯಾದವ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
భారత ఓటమిని జీర్ణించుకోలేక గుండెపోటుతో అభిమాని మృతి
తిరుపతి – వరల్డ్ కప్ ఫైనల్లో ఆస్ట్రేలియా చేతిలో భారత జట్టు ఓటమిని జీర్ణించుకోలేక తిరుపతి మండలం దుర్గసముద్రానికి చెందిన జ్యోతి కుమార్ యాదవ్ ఓటమి అనంతరం, రోహిత్ శర్మ కన్నీళ్లు పెట్టుకున్న వీడియోలు చూస్తూ చలించిపోయాడు.… pic.twitter.com/ZdF4Eg0fLI
— Telugu Scribe (@TeluguScribe) November 20, 2023


