
ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವಕ ಹಾಗೂ ಯುವತಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ನಂತರ ಯುವಕ ಯುವತಿಗೆ ಕೈ ಕೊಟ್ಟಿದ್ದಾನೆ.
ಪ್ರಿಯಕರ ಕೈ ಕೊಟ್ಟಿದ್ದರಿಂದ ಬೇಸರಗೊಂಡ ಯುವತಿ ಯುವಕನ ಮನೆ ಟೆರೇಸ್ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ. ಯುವತಿ ಮನೆಗೆ ಬರುವ ವಿಷಯ ತಿಳಿದಿದ್ದ ಯುವಕ ಮೊದಲೇ ಎಸ್ಕೇಪ್ ಆಗಿದ್ದನು.

