HomeEntertainmentನಾನು ‘ಪ್ರಗ್ನೆಂಟ್’, ದಯವಿಟ್ಟು ಮನೆಗೆ ಕಳುಹಿಸಿ ಎಂದ ‘ಬಿಗ್ ಬಾಸ್’ ಸ್ಪರ್ಧಿ

ನಾನು ‘ಪ್ರಗ್ನೆಂಟ್’, ದಯವಿಟ್ಟು ಮನೆಗೆ ಕಳುಹಿಸಿ ಎಂದ ‘ಬಿಗ್ ಬಾಸ್’ ಸ್ಪರ್ಧಿ

ಹಿಂದಿ ‘ಬಿಗ್ ಬಾಸ್’ ಸೀಸನ್ 17 ಮನೆಯೊಳಗೆ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಸಿಗುತ್ತಿದೆ. ಇದೀಗ ನಾನು ಪ್ರಗ್ನೆಂಟ್ ಆಗಿದ್ದೇನೆ ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ ಎಂದು ಹಿಂದಿ ಬಿಗ್ ಬಾಸ್ ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.ವಿವಾಹಿತ ದಂಪತಿಗಳಾದ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ ಅಂಕಿತಾ ಲೋಖಂಡೆ ‘ತನಗೆ ಆರೋಗ್ಯ ಸರಿಯಿಲ್ಲ ಮತ್ತು “ಗರ್ಭಧಾರಣೆಯ ಪರೀಕ್ಷೆಗೆ ಒಳಗಾಗಿದ್ದೇನೆ” ಎಂದು ಬಹಿರಂಗಪಡಿಸಿದರು. ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ ಪೇಜ್ ಹಂಚಿಕೊಂಡಿರುವ ವೀಡಿಯೊದಲ್ಲಿ ನನಗೆ ಆರೋಗ್ಯ ಸರಿಯಿಲ್ಲ. ನಾನು ಮಾನಸಿಕವಾಗಿ ದಣಿದಿದ್ದೇನೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಋತುಚಕ್ರವನ್ನು ತಪ್ಪಿಸಿಕೊಂಡಿದ್ದೇನೆ. ನಾನು ಮನೆಗೆ ಹೋಗಲು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ.

ಹಿಂದಿಯ ಬಿಗ್ ಬಾಸ್ ಶೋ ವನ್ನು ಸಲ್ಮಾನ್ ಖಾನ್ ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ. ಹಿಂದಿ ಬಿಗ್ ಬಾಸ್ ಶೋಗೆ ಭಾರಿ ಫ್ಯಾನ್ಸ್ ಇದ್ದು, ದಿನದಿಂದ ದಿನಕ್ಕೆ ಇದು ಬಹಳ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular