ಪ್ರೇರಣಾ (ಮೈಕ್ರೋಕ್ರೆಡಿಟ್) ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲು ಸಮಾಜ ಕಲ್ಯಾಣ ಇಲಾಖೆಯಡಿಯ ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
© ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ
© ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ
© ಸಂಘವು ನೋಂದಣಿಯಾಗಿದ್ದು ಕನಿಷ್ಠ 10 ಜನ ಸದಸ್ಯರನ್ನು ಒಳಗೊಂಡಿರಬೇಕು
© ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್
ಆಸಕ್ತ ಅರ್ಹರು ನವೆಂಬರ್ 29ರ ಒಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಅಥವಾ X ಖಾತೆ @SWDGokfswd.gok.