ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ.
ಇದುವರೆಗೆ ಗೃಹಲಕ್ಷ್ಮಿಯ ಒಂದು ಕಂತಿನ ಹಣ ಜಮಾ ಆಗದೇ ಇದ್ದವರಿಗೆ ಒಟ್ಟಿಗೆ 6 ಸಾವಿರ ಹಣ ಹಾಕುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಿಮ್ಮ ಖಾತೆಗೆ ಇನ್ನೂ ಹಣ ಬರದೇ ಇದ್ರೆ ಹತ್ತಿರದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್ (ವಿವರ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯನ್ನು ನೀಡಿ ಅವರ ಬಳಿ ಸಲಹೆಯನ್ನ ಪಡೆದುಕೊಳ್ಳಿ, ಏಕೆ ಹಣ ಬರಲಿಲ್ಲ, ಏನು ಸಮಸ್ಯೆಯಾಗಿದೆ..ಏನು ಮಾಡಬೇಕು ಎಂಬ ಸಲಹೆ ಪಡೆಯಿರಿ. ಖಾತೆಯನ್ನು ಹೊಂದಿರುವ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು ಎಂದು ಕೂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಹಣ ಜಮಾ ಆಗದೇ ಇದ್ದಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ಮೂರು ಕಂತಿನ 6000 ರೂ. ಖಾತೆಗೆ ಜಮಾ ಆಗುತ್ತದೆ.ಮುಂದಿನ 15 ದಿನದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು. 1902 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಹಿಳೆಯರು ಮಾಹಿತಿ ಪಡೆದುಕೊಳ್ಳಬಹುದು. ಇನ್ನೂ 15 ದಿನದೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.