alex Certify ಈ ಹಳ್ಳಿಯವರಿಗೆ ಹೇಳಿ ಹ್ಯಾಟ್ಸಾಫ್: ಪಕ್ಷಿಗಳ ಸಂರಕ್ಷಿಸಲು 7 ಗ್ರಾಮಗಳಲ್ಲಿ ಮೌನ ದೀಪಾವಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಳ್ಳಿಯವರಿಗೆ ಹೇಳಿ ಹ್ಯಾಟ್ಸಾಫ್: ಪಕ್ಷಿಗಳ ಸಂರಕ್ಷಿಸಲು 7 ಗ್ರಾಮಗಳಲ್ಲಿ ಮೌನ ದೀಪಾವಳಿ

ಈರೋಡ್: ದೀಪಾವಳಿ ಶಬ್ದ ಮಾಲಿನ್ಯದೊಂದಿಗೆ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಒತ್ತಡದ ಸಮಯವಾಗಿದೆ. ಆದರೆ, ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ 7 ಹಳ್ಳಿಗಳು ಕೇವಲ ದೀಪಗಳ ಮೂಲಕ ಪಟಾಕಿ ಶಬ್ದವಿಲ್ಲದೆ ಹಬ್ಬವನ್ನು ಆಚರಿಸುತ್ತವೆ, ಇದು ಹತ್ತಿರದ ಪಕ್ಷಿಧಾಮದ ಪಕ್ಷಿಗಳನ್ನು ಸಂರಕ್ಷಿಸುವ ಕ್ರಮವಾಗಿದೆ.

ಪಕ್ಷಿಧಾಮವಿರುವ ಈರೋಡ್‌ ನಿಂದ 10 ಕಿಲೋಮೀಟರ್‌ ದೂರದಲ್ಲಿರುವ ವಡಮುಗಂ ವೆಲ್ಲೋಡ್‌ನ ಸುತ್ತಮುತ್ತ ಈ ಗ್ರಾಮಗಳಿವೆ. ಸಾವಿರಾರು ಸ್ಥಳೀಯ ಪಕ್ಷಿ ಪ್ರಭೇದಗಳು ಮತ್ತು ಇತರ ಪ್ರದೇಶಗಳಿಂದ ವಲಸೆ ಹಕ್ಕಿಗಳು ಅಕ್ಟೋಬರ್ ಮತ್ತು ಜನವರಿ ನಡುವೆ ಮೊಟ್ಟೆಗಳನ್ನು ಇಡಲು ಮತ್ತು ಮರಿ ಮಾಡಲು ಅಭಯಾರಣ್ಯಕ್ಕೆ ಬರುತ್ತವೆ.

ದೀಪಾವಳಿ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬರುವುದರಿಂದ ಪಕ್ಷಿಧಾಮದ ಸುತ್ತಮುತ್ತ ವಾಸಿಸುವ 900 ಕ್ಕೂ ಹೆಚ್ಚು ಕುಟುಂಬಗಳು ಪಕ್ಷಿಗಳನ್ನು ಉಳಿಸಲು ಮುಂದಾಗಿದ್ದಾರೆ. ಪಟಾಕಿಗಳನ್ನು ಸಿಡಿಸಿ ಭಯಪಡಿಸಬಾರದು ಎಂದು ನಿರ್ಧರಿಸಿದ್ದಾರೆ. ಅಂದ ಹಾಗೆ, ಅವರು ಕಳೆದ 22 ವರ್ಷಗಳಿಂದ ಈ ಸಂರಕ್ಷಣಾ ವಿಧಾನ ಅನುಸರಿಸುತ್ತಿದ್ದಾರೆ.

ದೀಪಾವಳಿ ಸಮಯದಲ್ಲಿ ಅವರು ತಮ್ಮ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಪಟಾಕಿಗಳನ್ನು ಸಿಡಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಈ ವರ್ಷವೂ ಸೆಲ್ಲಪ್ಪಂಪಳಯಂ, ವಡಮುಗಂ ವೆಲ್ಲೊಡೆ, ಸೆಮ್ಮಂಡಂಪಳಯಂ, ಕರುಕ್ಕಂಕಟ್ಟು ವಲಸು, ಪುಂಗಂಪಾಡಿ ಮೊದಲಾದ ಗ್ರಾಮಗಳು ಮೌನ ದೀಪಾವಳಿಯ ಗೌರವಯುತ ಸಂಪ್ರದಾಯವನ್ನು ಎತ್ತಿ ಹಿಡಿದಿವೆ.

ಕುಟುಂಬಗಳು ತಮ್ಮದೇ ಆದ ರೀತಿಯಲ್ಲಿ ದೀಪಾವಳಿಯನ್ನು ಸಂತೋಷದಿಂದ ಆಚರಿಸುತ್ತಿದ್ದಂತೆ ಸಾವಿರಾರು ಪಕ್ಷಿಗಳು ಸುರಕ್ಷಿತವಾಗಿ ಮತ್ತು ಆನಂದದಿಂದ ಅಭಯಾರಣ್ಯದಲ್ಲಿ ಉಳಿದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...