
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಾನಕ್ಕೆ ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 30 ವರ್ಷ ದಾಟಿದರೂ ಮದುವೆ ಆಗದ ಹಿನ್ನೆಲೆಯಲ್ಲಿ ನೊಂದ ಈ ಬ್ರಹ್ಮಚಾರಿ ಯುವಕರು ದೇವರ ಮೊರೆ ಹೋಗುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಅದರಲ್ಲೂ ಕೃಷಿ ಕುಟುಂಬದಲ್ಲಿರುವ ಯುವಕರು ತಮಗೆ ಹೆಣ್ಣು ಸಿಗಲಿಲ್ಲವೆಂದು…ಬೇಗ ಕಂಕಣ ಭಾಗ್ಯ ಕರುಣಿಸುವಂತೆ ಮಾದಪ್ಪನಿಗೆ ಮೊರೆಯಿಡುತ್ತಿದ್ದಾರೆ. ಕೆಲವರು 200-250 ಕಿಮೀ ಪಾದಯಾತ್ರೆ ಮೂಲಕ ಮಾದಪ್ಪನ ಬೆಟ್ಟಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

