ತಿರುಪತಿ: ಡಿಸೆಂಬರ್ 23 ರಂದು ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪನ ದರ್ಶನದ 2.25 ಲಕ್ಷ ಟಿಕೆಟ್ ಗಳು ನವೆಂಬರ್ 10 ರಂದು ಟಿಕೆಟ್ ಮಾರಾಟ ಆರಂಭವಾದ ಕೇವಲ 20 ನಿಮಿಷದಲ್ಲಿ ಮಾರಾಟವಾಗಿದೆ. ಇದರೊಂದಿಗೆ ಟಿಟಿಡಿಗೆ 6.75 ಕೋಟಿ ರೂಪಾಯಿ ಆದಾಯ ಹರಿದು ಬಂದಿದ್ದು, ಇದು ದಾಖಲೆಯಾಗಿದೆ.
ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ವೈಭವದ ವೈಕುಂಠ ಏಕಾದಶಿ ಮಹೋತ್ಸವ ಜರುಗಲಿದ್ದು, ವೈಕುಂಠ ವಿಶೇಷ ದರ್ಶನದ ಟಿಕೆಟ್ ಗಳನ್ನು ನವೆಂಬರ್ 10 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆನ್ಲೈನ್ ನಲ್ಲಿ 300 ರೂ. ಮುಖಬೆಲೆಯ ಟಿಕೆಟ್ ಮಾರಾಟ ಆರಂಭವಾಗಿ 20 ನಿಮಿಷದಲ್ಲಿ 2.25 ಟಿಕೆಟ್ ಗಳು ಮಾರಾಟವಾಗಿವೆ. ಇದರೊಂದಿಗೆ ಟಿಟಿಟಿಗೆ 6.75 ಕೋಟಿ ರೂ. ಆದಾಯ ಬಂದಿದೆ.
ಇದರೊಂದಿಗೆ ಟಿಟಿಡಿ ಶ್ರೀವಾಣಿ ದರ್ಶನ ಹಾಗೂ ಕಾಣಿಕೆ ಟಿಕೆಟ್ ಗಳನ್ನು ಜಂಟಿಯಾಗಿ ಆರಂಭಿಸಿದ್ದು, ಗೊಂದಲ ಉಂಟಾದ ಕಾರಣ ನಂತರ ಅದನ್ನು ಸ್ಥಗಿತಗೊಳಿಸಿ ಡಿಸೆಂಬರ್ 22ರಂದು ಮಾರಾಟ ಮಾಡುವುದಾಗಿ ಟಿಟಿಡಿ ತಿಳಿಸಿದೆ.