ಬೆಂಗಳೂರು : 2024-25ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಅರ್ಹ ಶಿಕ್ಷಣ ಸಂಸ್ಥೆ ಟ್ರಸ್ಟಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿಕ್ಷಣ ಸಂಸ್ಥೆ ಟ್ರಸ್ಟ್2022-23 ಮತ್ತು 2023-24ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು Form-I ರಲ್ಲಿ ಆನ್ಲೈನ್ ಮೂಲಕ ಈಗಾಗಲೇ ಸಲ್ಲಿಸಿರುವ ಅರ್ಜಿಯನ್ನು ಪದವಿ ಪೂರ್ವ ಶಿಕ್ಷಣ ನಿಯಮಗಳು 2006ರ ನಿಯಮ 4(1) ರನ್ವಯ ಈ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ನಿಯಮಗಳು 2006ರ ನಿಯಮ 4(2) ಮತ್ತು 4(3) ರನ್ವಯ Letter of intentನ್ನು ಸಹ ನೀಡಲಾಗಿದೆ.
ಉದ್ದೇಶಿತ ಕಾಲೇಜು ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದಿರುವ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಆಕ್ಷೇಪಿಸಿ ಸಂಬಂಧಿಸಿದ ಶಿಕ್ಷಣ ಸಂಸ್ಥೆ’ಟ್ರಸ್ಗಳಿಂದ ಹಿಂಬರಹ ನೀಡಲಾಗಿದೆ.
ನಿಯಮಾನುಸಾರ ಕಾಲೇಜು ಕಟ್ಟಡದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಮತ್ತು ಈ ಹಿಂದೆ ಆಕ್ಷೇಪಿಸಿದ ಅಗತ್ಯ ದಾಖಲೆಗಳೊಂದಿಗೆ ಹೊಸದಾಗಿ ಕಾಲೇಜು ಪ್ರಾರಂಭಿಸಲು ಕೊನೆಯ ಅವಕಾಶವಾಗಿರುತ್ತದೆ.
ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ, ತಪಾಸಣ ಸಮಿತಿExpert body ವರದಿಯೊಂದಿಗೆ ಪ್ರಸ್ತಾವನೆಯನ್ನು ಸಮುಚಿತ ಮಾರ್ಗದಲ್ಲಿ ನಿರ್ದೇಶನಾಲಯಕ್ಕೆ ಸಲ್ಲಿಸಲು ತಿಳಿಸಿದೆ.
ಸೂಚನೆಗಳು
1. 2022-23 ಮತ್ತು 2023-24ನೇ ಸಾಲಿನ ಹೊಸ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಸ್ತಾವನೆಗಳನ್ನು ಇ-ಆಫೀಸ್ನಲ್ಲಿ ಚಾಲನೆ ಮಾಡಿದೆ. ನಿರ್ದೇಶನಾಲಯದಿಂದ ಸದರಿ ಕಾಲೇಜುಗಳ ಮಂಜೂರಾತಿಗೆ ಸಂಬಂಧಿಸಿದಂತೆ, ಆಕ್ಷೇಪಣೆ’ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿಯ ಹಂತದಿಂದಲೇ ಇ-ಆಫೀಸ್ನಲ್ಲಿ ಕಡ್ಡಾಯವಾಗಿ ಕಡತ ಚಾಲನೆ ಮಾಡುವುದು.
2. 2024-25ನೇ ಶೈಕ್ಷಣಿಕ ಸಾಲಿಗೆ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಲು ಪ್ರಕ್ರಿಯೆಯನ್ನು ಉಲ್ಲೇಖ-05ರ ಸರ್ಕಾರದ ಪತ್ರದನ್ವಯ ಕ್ರಮಕೈಗೊಳ್ಳಲಾಗುವುದು.
3.ಪದವಿ ಪೂರ್ವ ಶಿಕ್ಷಣ ನಿಯಮಗಳು 2006ರ ನಿಯಮ 4 ರನ್ವಯ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಚಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆ’ಟ್ರಸ್ಟಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಶಿಕ್ಷಣ ಸಂಸ್ಥೆ ಟ್ರಸ್ಟಿಗಳು ಇಲಾಖೆಯ ವೆಬ್ಸೈಟ್ “https://pue.karnataka.gov.in/” ಇಲ್ಲಿ ನಿಗದಿತ ಲಿಂಕ್ https://dpue-pragathi.karnataka.gov.in/newcollege2024 ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು “ನಿಗದಿತ ನಮೂನೆ” (Form-1)ರಲ್ಲಿ ಸಂಸ್ಥೆ ಟ್ರಸ್ಟ್ ಗಳು ಅರ್ಜಿಯನ್ನು ನೋಂದಾಯಿಸಿಕೊಳ್ಳತಕ್ಕದ್ದು
ನಿಗದಿತ ಕಾಲಾವಕಾಶದೊಳಗೆ ಆನ್ಲೈನ್ ಮೂಲಕ ಸಲ್ಲಿಸಲ್ಪಡುವ ಅರ್ಜಿಗಳನ್ನು ಮಾತ್ರ ನಿಯಮಾನುಸಾರ ಶೀಲಿಸಲಾಗುವುದು. ಮುದ್ದಾಂ ಅಥವಾ ನೇರವಾಗಿ ಸಲಿಸಲ್ಪಡುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
4. ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸುವ ಪೋರ್ಟಲ್ ಇನ್ನು ಮುಂದೆ ಆಯಾ ಶೈಕ್ಷಣಿಕ ವರ್ಷಕ್ಕೆ ಅವಧಿ ಪೂರ್ಣಗೊಳ್ಳುವ/ವರ್ಷದ ಎಲ್ಲಾ ದಿನಗಳು ಸಹಾ ನಿರಂತರವಾಗಿ ತರೆದಿರುತ್ತದೆ.
5. ದಿನಾಂಕ: 28-02-2024ರೊಳಗೆ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಇದಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಮಂಜೂರಾತಿಯನ್ನು ನೀಡಲಾಗುವುದು. ಮಂಜೂರಾತಿಯನ್ನು ಪಡೆಯದ ಅರ್ಜಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು ಸಲ್ಲಿಸಿರುವ ಅರ್ಜಿಯು ಮೂರು (03) ವರ್ಷಗಳಿಗೆ ಮಾತ್ರ ತನ್ನ ಸಿಂಧುತ್ವ ಅರ್ಹತೆ ಪಡೆದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ https://pue.karnataka.gov.in/new-page/Opening%20of%20new%20Colleges/kn ವೀಕ್ಷಿಸಬಹುದು.