HomeKarnatakaಪೋಷಕರೇ ಗಮನಿಸಿ : ನವೋದಯ ವಿದ್ಯಾಲಯದ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪೋಷಕರೇ ಗಮನಿಸಿ : ನವೋದಯ ವಿದ್ಯಾಲಯದ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 9 ಮತ್ತು 11ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ನ. 15 ರವರೆಗೆ ವಿಸ್ತರಿಸಲಾಗಿದೆ.

https://cbseitms.nic.in/2023/nvsix/PrincipalLogin/getafflictionno ವೈಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 2023-24ರ ಶೈಕ್ಷಣಿಕ ಅವಧಿಯಲ್ಲಿ 8ನೇ ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

9ನೇ ತರಗತಿಗೆ ಅರ್ಜಿ ಸಲ್ಲಿಸಲು 2009 ಮೇ 05 ರಿಂದ 2011ರ ಜುಲೈ 31 ರ ನಡುವೆ ಜನಿಸಿರಬೇಕು. 11ನೇ ತರಗತಿಗೆ ಅರ್ಜಿ ಸಲ್ಲಿಸಲು 2007 ಜೂನ್ 01 ರಿಂದ 2009 ಜುಲೈ 31 ರ ನಡುವೆ ಜನಿಸಿರಬೇಕು. ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳಿಗೆ ಸೇರಿದಂತೆ ಎಲ್ಲಾ ವರ್ಗದ ಅಭರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular