HomeKarnatakaBREAKING: ಪೇಂಟ್ ಮಿಕ್ಸರ್ ಗೆ ಜಡೆ ಸಿಲುಕಿ ದುರಂತ; ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆಯೇ...

BREAKING: ಪೇಂಟ್ ಮಿಕ್ಸರ್ ಗೆ ಜಡೆ ಸಿಲುಕಿ ದುರಂತ; ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆಯೇ ಕಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ ಗೆ ಮಹಿಳೆಯೊಬ್ಬರ ಜಡೆ ಸಿಲುಕಿಕೊಂಡು ಮಹಿಳೆಯ ತಲೆಯೇ ಕಟ್ ಆಗಿರುವ ಘಟನೆ ನಡೆದಿದೆ.

ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವಾಗ ಈ ಅವಘಡ ಸಂಭವಿಸಿದೆ. ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ 33 ವರ್ಷದ ಶ್ವೇತಾ ಮೃತ ಮಹಿಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪೇಂಟ್ ಬೆರೆಸುವ ಗ್ರೈಂಡರ್ ಗೆ ಮಹಿಳೆಯ ಜಡೆ ಸಿಲುಕಿಕೊಂಡಿದೆ ಮಹಿಳೆ ಕೂಗಿಕೊಂಡರು ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ, ನೋಡ ನೋಡುತ್ತಿದ್ದಂತೆಯೇ ಮಹಿಳೆಯ ತಲೆಯೇ ಗ್ರೈಂಡರ್ ಗೆ ಸಿಲುಕಿ ಕಟ್ ಆಗಿದೆ.

ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular