ಕಲಬುರ್ಗಿ: ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಕಲಬುರ್ಗಿ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ರಮೇಶ್ ಸುಂಬಡ್ ಸಸ್ಪೆಂಡ್ ಆದ ಅಧಿಕಾರಿ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಸಗಿದ ಆರೋಪದಲ್ಲಿ ರಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಜೇಷ್ಠತೆ ಇಲ್ಲದ ಅರ್ಜಿಗಳ ಪರಿಗಣನೆ ಹೆಚ್ಚುವರಿ ಮೊತ್ತ ಸಹಾಯಧನ ಪಾವತಿ ಮಾಡಿದ ಆರೋಪ ರಮೇಶ್ ಮೇಲಿದೆ. ಕಾರ್ಮಿಕ ಕಚೇರಿ ನೀಡಿದ ವರದಿ ಅನ್ವಯ ಸರ್ಕಾರ ಅಮಾನತು ಮಾಡಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಯೊಬ್ಬರಿಗೆ 9 ಸಾವಿರ ಬದಲು 90 ಸಾವಿರ ಜಮೆ ಮಾಡಿರುವುದು ಬೆಳಕಿಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಲ ಸಂಘಟನೆಯವರು ಸಚಿವ ಸಂತೋಷ್ ಲಾಡ್ ಗೆ ಮನವಿ ಸಲ್ಲಿಸಿದ್ದರು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.