HomeKarnatakaಶಿವಮೊಗ್ಗ ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಅರೆಸ್ಟ್

ಶಿವಮೊಗ್ಗ ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಅರೆಸ್ಟ್

ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ ಎರಡು ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಠಾಣೆ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಭದ್ರಾವತಿ ಮೂಲದ ನಜರುಲ್ಲಾ, ತಿಪಟೂರು ಮೂಲದ ಜಬಿವುಲ್ಲಾ ಬಂಧಿತ ಆರೋಪಿಗಳು. ತಿಪಟೂರು ಮೂಲದ ಗಿರೀಶ್ ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ಗೆ ಒಂದು ಕೋಟಿ ರೂಪಾಯಿ ಕೊಡಿಸುವುದಾಗಿ ಗಿರೀಶ್ ಗೆ ನಂಬಿಸಿದ್ದ ನಜರುಲ್ಲಾ 2.5 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದ. ಹಣ ಕೊಡದೆ ಸತಾಯಿಸಿದ್ದು, ಕೊಟ್ಟ ಹಣ ವಾಪಸ್ ಕೇಳಿದಾಗ ನವೆಂಬರ್ 3ರಂದು ಶಿವಮೊಗ್ಗಕ್ಕೆ ಬರುವಂತೆ ಹೇಳಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲ್ವೆ ನಿಲ್ದಾಣದ ಬಳಿ ಬಾಕ್ಸ್ ನಲ್ಲಿ ಹಣ ಇಟ್ಟಿರುವುದಾಗಿ ತಿಳಿಸಿ ನಜರುಲ್ಲಾ ಸುತ್ತಮುತ್ತ ಪೊಲೀಸರು ಇರುತ್ತಾರೆ ಹುಷಾರು ಎಂದು ಹೆದರಿಸಿದ್ದಾನೆ. ಪೊಲೀಸರ ಭಯದಿಂದ ಗಿರೀಶ್ ಹಣ ಮುಟ್ಟದೆ ವಾಪಸ್ ತೆರಳಿದ್ದಾನೆ. ಅನುಮಾನಾಸ್ಪದ ಬಾಕ್ಸ್ ವಿಷಯ ಬಹಿರಂಗವಾದ ನಂತರ ದೂರು ನೀಡಿದ್ದಾನೆ. ಆರೋಪಿಗಳು ಬಾಕ್ಸ್ ಗಳಲ್ಲಿ ಹಣ ಇದೆ ಎಂದು ನಂಬಿಸಿ ವಂಚಿಸಲು ಯತ್ನಿಸಿರುವುದು ಗೊತ್ತಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular