HomeCrimeಪ್ರೇಮಿಗಳು ಹೊಟೇಲ್ ರೂಮ್ ಗೆ ಹೋದ ಕೆಲವೇ ಕ್ಷಣದಲ್ಲಿ ಕೇಳಿ ಬಂದಿತ್ತು ಚೀರಾಟ....!

ಪ್ರೇಮಿಗಳು ಹೊಟೇಲ್ ರೂಮ್ ಗೆ ಹೋದ ಕೆಲವೇ ಕ್ಷಣದಲ್ಲಿ ಕೇಳಿ ಬಂದಿತ್ತು ಚೀರಾಟ….!

ಉತ್ತರ ಪ್ರದೇಶದ ತಾಜ್ ನಗರದ ಆಗ್ರಾದ ಹೋಟೆಲ್ ಒಂದರಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿಗಳಿಬ್ಬರು ರೂಮ್‌ ಬುಕ್‌ ಮಾಡಿ, ರೂಮಿಗೆ ಹೋಗಿದ್ದಾರೆ. ಕೆಲ ಸಮಯದಲ್ಲೇ ಚೀರಾಟ ಕೇಳಿ ಬಂದಿದೆ. ಹೊಟೇಲ್‌ ಸಿಬ್ಬಂದಿ ರೂಮ್‌ ಬಳಿ ಹೋಗಿ ಕಿಟಕಿಯಿಂದ ಬಗ್ಗಿ ನೋಡಿದ್ದಾರೆ. ಒಳಗಿನ ಸ್ಥಿತಿ ನೋಡಿ ದಂಗಾಗಿದ್ದಾರೆ.

ಜನ್ಮಭೂಮಿ ಲಿಂಕ್ ರಸ್ತೆಯಲ್ಲಿರುವ ಹೋಟೆಲ್ ನಂದ್ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಯುವಕ ಮತ್ತು 20 ವರ್ಷದ ಯುವತಿ ಹೊಟೇಲ್‌ ನಲ್ಲಿ ರೂಮ್‌ ಬುಕ್‌ ಮಾಡಿದ್ದಾರೆ. ಹೋಟೆಲ್ ಗೆ ಬಂದ ಜೋಡಿ ಆರಾಮಾಗಿಯೇ ರೂಮ್‌ ಗೆ ಹೋಗಿದೆ. ಆದ್ರೆ ಅಲ್ಲಿ ಏನಾಯ್ತೋ ಗೊತ್ತಿಲ್ಲ, ಯುವಕ, ಯುವತಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದಾದ ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡಿದ್ದಾರೆ. ಇಬ್ಬರೂ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದಲ್ಲದೆ ನೋವು ತಾಳಲಾರದೆ ಕೂಗಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡ್ತಿದ್ದಾರೆ. ಹುಡುಗಿ ಪದವಿ ಶಿಕ್ಷಣ ಪಡೆಯುತ್ತಿದ್ದು, ಹುಡುಗ ಓದುವ ಜೊತೆಗೆ ಉದ್ಯೋಗ ಮಾಡ್ತಿದ್ದಾನೆ. ಇಬ್ಬರ ನಡುವೆ ಹಳೆ ಜಗಳ ಇತ್ತು. ಸಂಚು ರೂಪಿಸಿ ಯುವಕ ಆಕೆಯನ್ನು ಹೋಟೆಲ್‌ಗೆ ಕರೆದೊಯ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular