HomeKarnatakaSHOCKING NEWS: ಜಮೀನು ವಿವಾದ; ಅಣ್ಣನ ಮಗನನ್ನೇ ಗುಂಡಿಟ್ಟು ಕೊಂದ ತಮ್ಮ

SHOCKING NEWS: ಜಮೀನು ವಿವಾದ; ಅಣ್ಣನ ಮಗನನ್ನೇ ಗುಂಡಿಟ್ಟು ಕೊಂದ ತಮ್ಮ

ಮಂಡ್ಯ: ಜಮೀನು ವಿವಾದ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಅಣ್ಣನ ಮಗನನ್ನೇ ತಮ್ಮ ಶೂಟ್ ಮಾಡಿ ಸಾಯಿಸಿದ್ದಾನೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಜಯಪಾಲ್ ಚಿಕ್ಕಪ್ಪನಿಂದಲೇ ಕೊಲೆಯಾದ ಯುವಕ. ಸೀಮೆಎಣ್ಣೆ ಕುಮಾರ್ ಯುವಕನನ್ನ ಕೊಂದ ಆರೋಪಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೀಮೆಎಣ್ಣೆ ಕುಮಾರ್ ಹಾಗೂ ಅಣ್ಣ ವಾಸುವಿನ ನಡುವೆ ಜಮೀನು ವಿಚಾರವಾಗಿ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಮಾತನಾಡಲು ವಾಸು ಹಾಗೂ ಆತನ ಮಗ ಜಯಪಾಲ್ ನನ್ನು ಜಮೀನಿಗೆ ಕರೆಸಿಕೊಂಡಿದ್ದರು. ಮಾತುಕತೆ ವೇಳೆ ವಾಗ್ವಾದ ತಾರಕ್ಕೇರಿದೆ. ಸೀಮೆಎಣ್ಣೆ ಕುಮಾರ್ ತನ್ನ ಬಳಿ ಇದ್ದ ಗನ್ ನಿಂದ ಅಣ್ಣನ ಮಗ ಜಯಪಾಲ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ.

ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular