ಜನಪ್ರಿಯ ನಟಿ ಹುಮೈರಾ ಹಿಮು ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಜನಪ್ರಿಯ ನಟಿ ಹುಮೈರಾ ಕತ್ತಿನ ಭಾಗದಲ್ಲಿ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆ ತರುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂಬುದು ವರದಿಯಾಗಿದೆ. ಸದ್ಯ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ನಂತರವಷ್ಟೇ ಸಾವಿನ ನಿಖರತೆ ತಿಳಿದು ಬರಲಿದೆ.
ಹುಮೈರಾ ಹಿಮು 2006 ರಲ್ಲಿ ರಂಗಭೂಮಿಯೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು “ಛಾಯಾಬಿತಿ” ಸರಣಿಯೊಂದಿಗೆ ದೂರದರ್ಶನದಲ್ಲಿ ನಟಿಸಲು ಪ್ರಾರಂಭಿಸಿದರು. ನಂತರ ಅವರು ಜನಪ್ರಿಯ ಟಿವಿ ಸರಣಿಗಳಾದ “ಬರಿ ಬಾರಿ ಸೀರೆ ಸೀರೆ”, “ಹೌಸ್ ಫುಲ್”, “ಗುಲ್ಶನ್ ಅವೆನ್ಯೂ”, “ಸೋನಾಘಾಟ್”, “ಚೇರ್ಮನ್ ಬಾರಿ”, “ಬಟಿಘರ್”, “ಶೋನೆನಾ ಸೆ ಶೋನೆನಾ” ಇತ್ಯಾದಿಗಳಲ್ಲಿ ಗಮನ ಸೆಳೆದರು.
ಅವರ ಮೊದಲ ಚಿತ್ರ ಮೊರ್ಶೆದುಲ್ ಇಸ್ಲಾಂ ನಿರ್ದೇಶನದ ‘ಅಮರ್ ಬೊಂಧು ರಶೀದ್’ ಮೂಲಕ ಖ್ಯಾತಿಯನ್ನು ಪಡೆದರು. ನಂತರ ಅವರು ದೂರದರ್ಶನದ ಮೇಲೆ ಹೆಚ್ಚು ಗಮನ ಹರಿಸಿದರು.