HomeKarnatakaBIGG NEWS : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ನಟ ದರ್ಶನ್ ಗೆ...

BIGG NEWS : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ನಟ ದರ್ಶನ್ ಗೆ ನೋಟಿಸ್ ನೀಡಲು `ಆರ್.ಆರ್.ನಗರ ಪೊಲೀಸರು ಸಿದ್ಧತೆ

ಬೆಂಗಳೂರು : ಸ್ಯಾಂಡಲ್ ವುಡ್ ನಟ  ದರ್ಶನ್ ಅವರ ಮನೆಯ ನಾಯಿ ಕಚ್ಚಿದೆ ಎಂದು ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ನಟ ದರ್ಶನ್ ಮನೆ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್ ಗೆ ನೋಟಿಸ್ ನೀಡಲು ಆರ್. ಆರ್. ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೊದಲ ಆರೋಪಿ ಹೇಳಿಕೆ ದಾಖಲಿಸಿಕೊಂಡಿದ್ದು, ಇದೀಗ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಗೆ ವಿಚಾರಣೆಗೆ ಹಾಜರಾಗುವಂತೆ ಇಂದು ನೋಟಿಸ್ ನೀಡುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರುದಾರ ಅಮಿತಾ ಜಿಂದಾಲ್ ಅವರು ಕಳೆದ ಅಕ್ಟೋಬರ್ 28 ರಂದು ಕಾರ್ಯಕ್ರಮವೊಂದಕ್ಕೆ ತೆರಳುವ ವೇಳೆ ನಟ ದರ್ಶನ್ ಅವರ ಮನೆಯ ಎದುರಿನ ಖಾಲಿ ಸ್ಥಳದಲ್ಲಿದ್ದ ತಮ್ಮ ಕಾರು ನಿಲ್ಲಿಸಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಕಾರು ತೆಗೆಯಲು ಬಂದಾಗ ಮೂರು ನಾಯಿಗಳ ಪೈಕಿ ಎರಡನ್ನು ಕಟ್ಟಲಾಗಿತ್ತು. ಒಂದು ನಾಯಿ ದಾಳಿ ನಡೆಸಿದೆ ಎಂದು ದೂರು ನೀಡಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular